For Quick Alerts
  ALLOW NOTIFICATIONS  
  For Daily Alerts

  ಬೇಸರಗೊಂಡು ಹುಟ್ಟುಹಬ್ಬ ಬೇಡ ಎಂದ ರವಿಚಂದ್ರನ್

  By Rajendra
  |

  ಕನಸುಗಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ಬೇಸರಗೊಂಡಿದ್ದಾರೆ. ಇದೇ ಮೇ.30ರಂದು ಅವರು 51ನೇ ವಸಂತಕ್ಕೆ ಅಡಿಯಿಡುತ್ತಿದ್ದಾರೆ. ಆದರೆ ಈ ಸಂಭ್ರಮ, ಸಡಗರ ಅವರ ಮುಖದಲ್ಲಿಲ್ಲ. ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಕನಸುಗಾರ ಬೇಸರದಿಂದ ಪ್ರಕಟಿಸಿದ್ದಾರೆ. ಯಾಕೆ ರವಿಚಂದ್ರನ್ ಅವರಿಗೆ ಏನಾಯಿತು?

  ಅವರ ಬಹುನಿರೀಕ್ಷಿತ 'ಮಂಜಿನ ಹನಿ' ಕಡೆಗೂ ಒಂದು ಹಂತಕ್ಕೆ ಬಂದು ನಿಂತಿದೆ. ಈ ಚಿತ್ರದ ಮೇಲೆ ರವಿಚಂದ್ರನ್ ಬಹಳಷ್ಟು ಕನಸುಗಳನ್ನು ಹೊತ್ತಿದ್ದಾರೆ. ಈ ಚಿತ್ರ ಬಿಡುಗಡೆಯಾದ ದಿನವೇ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ ಎಂದು ರವಿ ಹೇಳಿದ್ದಾರೆ.

  "ತನ್ನ ಅಭಿಮಾನಿಗಳು ಯಾರು ಮೇ.30ರಂದು ಕೇಕು, ಹಾರ, ತುರಾಯಿ ಹಿಡಿದು ಡಾ.ರಾಜ್ ಕುಮಾರ್ ರಸ್ತೆಯ ತನ್ನ ಮನೆಗೆ ಬರಬೇಡಿ" ಎಂದು ರವಿಚಂದ್ರನ್ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಹಿಂದೊಮ್ಮೆ ರವಿಚಂದ್ರನ್ ತಮ್ಮ ಹುಟ್ಟುಹಬ್ಬದದಿನ 'ಮಂಜಿನ ಹನಿ'ಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.

  ಆದರೆ ಕಾರಣಾಂತರಗಳಿಂದ 'ಮಂಜಿನಿ ಹನಿ' ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ತಮ್ಮ ಹುಟ್ಟುಹಬ್ಬದ ದಿನವೇ ತಮ್ಮ ಮಗ ಮನೋರಂಜನ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುವ ಕನಸನ್ನೂ ರವಿ ಕಂಡಿದ್ದರು. ಈ ಕನಸು ಅವರ ಹುಟ್ಟುಹಬ್ಬದ ದಿನ ನೆರವೇರುವುದು ಬಹುತೇಕ ಅನುಮಾನ.

  ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರವಿಚಂದ್ರನ್ ತಮ್ಮ 50ನೇ ಹುಟ್ಟುಹಬ್ಬಕ್ಕೆ ಗುಡ್‌ಬೈ ಹೇಳಿದ್ದಾರೆ. ಬಹುಶಃ ಅವರ 'ಮಂಜಿನ ಹನಿ' ಚಿತ್ರ ಜೂನ್ ಅಂತ್ಯಕ್ಕೆ ತೆರೆಕಾಣುವ ಸಾಧ್ಯತೆಗಳಿವೆ. ಸದ್ಯಕ್ಕೆ ಆ ಚಿತ್ರದ ಗ್ರಾಫಿಕ್ಸ್ ಕೆಲಸವನ್ನು ಸ್ವತಃ ರವಿಚಂದ್ರನ್ ಅವರೇ ತಮ್ಮ ಮನೆಯಲ್ಲಿ ಪೂರೈಸುತ್ತಿದ್ದಾರೆ. ಮೇ.30ರಂದು ಅಭಿಮಾನಿಗಳು ಏನು ಮಾಡುತ್ತಾರೋ ಕಾದುನೋಡಬೇಕು. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Crazy Star V Ravichandran has announced that he is not celebrating his 50th birthday on May 30. He announced that he celebrates his birthday on his dream project Manjina Hani release. He requested his fans, not to come with cakes on my birthday this year to my home.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X