»   »  ತುಮಕೂರಿನಿಂದ ನಟ ಅಶೋಕ್ ಲೋಕಸಭೆಗೆ

ತುಮಕೂರಿನಿಂದ ನಟ ಅಶೋಕ್ ಲೋಕಸಭೆಗೆ

Subscribe to Filmibeat Kannada
Ashok to contest Lok Sabha polls
ಈ ಬಾರಿಯ ಲೋಕಸಭೆ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ನಟ, ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ನಿರ್ಧರಿಸಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಟಿಕೆಟ್ ಪಡೆಯದೆ ಪಕ್ಷೇತರಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರು ತೀರ್ಮಾನಿಸಿದ್ದಾರೆ.

ಮಧುಗಿರಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಮೂರು ಪಕ್ಷಗಳು ಸೇರಿ ಏನಿಲ್ಲವೆಂದರೂ 40 ಕೋಟಿ ರು.ಗಳಷ್ಟು ಹಣ ಖರ್ಚು ಮಾಡಿವೆ. ಒಂದು ವೇಳೆ ಇಷ್ಟು ಹಣವನ್ನು ಮಧುಗಿರಿ ಅಭಿವೃದ್ಧಿಗೆ ಬಳಸಿದ್ದರೆ ಅಲ್ಲಿನ ಜನಕ್ಕೆ ಸಕಲ ಸೌಲಭ್ಯಗಳು ಸಿಗುತ್ತಿದ್ದವು. ಸುಖಾಸುಮ್ಮನೆ ರಾಜಕೀಯ ಪಕ್ಷಗಳು ಹಣ ಮತ್ತು ಹೆಂಡದ ಆಮೀಷವನ್ನು ಜನಕ್ಕೆ ಒಡ್ಡುತ್ತಿವೆ. ನಾನು ಜನರ ವ್ಯಕ್ತಿಯಾಗಲು ಬಯಸುತ್ತೇನೆ. ಅವರ ಏಳಿಗೆಗಾಗಿ ದುಡಿಯುತ್ತೇನೆ ಎಂದು ಅವರು ರಾಜಕೀಯಕ್ಕೆ ಬರುತ್ತಿರುವ ಉದ್ದೇಶವನ್ನು ತಿಳಿಸಿದರು.

ಕಳೆದ 20 ವರ್ಷಗಳಿಂದ ಅಶೋಕ್ ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಯಾವುದೇ ಚಿತ್ರದಲ್ಲೂ ನಟಿಸಿಲ್ಲ. ಈಗ ಅಧ್ಯಕ್ಷ ಸ್ಥಾನವನ್ನು ತಮ್ಮ ಸಹಾಯಕರಿಗೆ ಬಿಟ್ಟುಕೊಟ್ಟು ತಾವು ರಾಜಕೀಯ ಕ್ಷೇತ್ರಕ್ಕೆ ಧುಮುಕಲು ನಿರ್ಧರಿಸಿರುವುದು ಸ್ಪಷ್ಟವಾಗಿದೆ. ಹೆಣ್ಣು ಸಂಸಾರದ ಕಣ್ಣು ಚಿತ್ರದ ಮೂಲಕ ಕನ್ನ್ನಡ ಚಿತ್ರರಂಗೆಕ್ಕೆ ಅಡಿಯಿಟ್ಟ ಅಶೋಕ್ ನಂತರ ಸನಾದಿ ಅಪ್ಪಣ್ಣ, ವಿಜಯವಾಣಿ, ರಂಗನಾಯಕಿ, ಚೆಲ್ಲಿದ ರಕ್ತ, ತಾಯಿಯ ಮಡಿಲು ಸೇರಿದಂತೆ ಅನೇಕ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada