»   » ಬೆಳಗಾವಿಯಲ್ಲಿ ಪ್ರತಿಷ್ಠಿತ ಮಕ್ಕಳ ಚಿತ್ರೋತ್ಸವ

ಬೆಳಗಾವಿಯಲ್ಲಿ ಪ್ರತಿಷ್ಠಿತ ಮಕ್ಕಳ ಚಿತ್ರೋತ್ಸವ

Subscribe to Filmibeat Kannada
International Children’s Film Fest 2010 in belgaum
ಜಿಲ್ಲಾ ಆಡಳಿತ, ಚಿಲ್ಡ್ರನ್ ಫೀಲ್ಮ್ ಸೊಸೈಯಿಟಿ ಹಾಗೂ ಅಜಂತಾ ಫೀಲ್ಮ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಬರುವ ಜನವರಿ 11 ರಿಂದ 13 ರವರೆಗೆ ಮೂರು ದಿನಗಳ 6ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಬೆಳಗಾವಿಯಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದೆ.

ಅಪರ ಜಿಲ್ಲಾಧಿಕಾರಿ ಡಾ.ವಿಜಯಕುಮಾರ ತೋರಗಲ್ ಅವರ ಅಧ್ಯಕ್ಷತೆಯಲ್ಲಿ ಈ ಚಲನಚಿತ್ರೋತ್ಸವ ಏರ್ಪಡಿಸುವ ಕುರಿತಂತೆ ನಡೆದ ಸಭೆಯಲ್ಲಿ 6ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಏರ್ಪಡಿಸಲು ನಿರ್ಧರಿಸಲಾಯಿತು.

ಈ ಚಲನಚಿತ್ರೋತ್ಸವ ಅಂಗವಾಗಿ ಎರಡು ಚಲನಚಿತ್ರ ಮಂದಿರಗಳಲ್ಲಿ ಒಟ್ಟು 6 ಮಕ್ಕಳ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ತಲಾ ಒಂದರಂತೆ ಕನ್ನಡ, ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಮಕ್ಕಳ ಚಲನಚಿತ್ರ ಪ್ರದರ್ಶಿಸಲಾಗುತ್ತದೆ. ಅದರಂತೆ ಮೂರು ಇಂಗ್ಲೀಷ ಭಾಷೆಯ ಮಕ್ಕಳ ಚಲನಚಿತ್ರಗಳನ್ನು ಸಹ ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು. ಚಲನಚಿತ್ರ ವೀಕ್ಷಣೆಗೆ ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗುತ್ತಿದ್ದು, ಪ್ರತಿದಿನ ಚಲನಚಿತ್ರದ ಒಂದು ಶೋ ಪ್ರದರ್ಶಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಬೆಂಗಳೂರ, ಮಂಡ್ಯ, ಮೈಸೂರು, ಹುಬ್ಬಳ್ಳಿ ಹಾಗೂ ಬೆಳಗಾವಿಗಳಲ್ಲಿ ಏಕಕಾಲದಲ್ಲಿ ಈ ಚಲನಚಿತ್ರೋತ್ಸವವನ್ನು ಆಚರಿಸಲಾಗುತ್ತಿದ್ದು, ಬೆಳಗಾವಿಯಲ್ಲಿ ಜನವರಿ 11 ರಂದು ಈ ಚಲನಚಿತ್ರೋತ್ಸವದ ಉದ್ಘಾಟನೆ ನಡೆಯಲಿದ್ದು, ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರಿಂದ ನೆರವೇರಿಸಲು ನಿರ್ಧರಿಸಲಾಗಿದೆ. ಈ ಚಲನಚಿತ್ರೋತ್ಸವಕ್ಕೆ ಸ್ಲಮ್ ಡಾಗ್ ಮಿಲಿಯನೇರ್, ಬಾಲ ಕಲಾಕಾರರನ್ನು ಸಹ ಆಹ್ವಾನಿಸಲು ನಿರ್ಧರಿಸಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada