For Quick Alerts
  ALLOW NOTIFICATIONS  
  For Daily Alerts

  'ಶೃಂಗಾರಕಾವ್ಯ' ನಟ ರಘುವೀರ್ ವೇಶ್ಯಾಗೃಹದಲ್ಲಿ ಸೆರೆ

  By Mahesh
  |

  ಚೈತ್ರದ ಪ್ರೇಮಾಂಜಲಿ' ಮೂಲಕ ಕನ್ನಡ ಚಿತ್ರರಸಿಕರ ಮನಗೆದ್ದಿದ್ದ ನಟ ರಘುವೀರ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಶೃಂಗಾರ ಕಾವ್ಯ ಚಿತ್ರ ಖ್ಯಾತಿಯ ನಟ ಇಬ್ಬರು ವೇಶ್ಯೆಯರೊಂದಿಗೆ ಶೃಂಗಾರ ಕ್ರಿಯೆಯಲ್ಲಿ ತೊಡಗಿದ್ದಾಗ ಮೈಸೂರಿನ ಲಷ್ಕರ್ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

  ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಫೈವ್ ಲೈಟ್ ವೃತ್ತದ ಬಳಿ ಇರುವ ಅಭಿಷೇಕ್ ಲಾಡ್ಜ್ ನಲ್ಲಿ ನಟ ರಘುವೀರ್ ಸೇರಿದಂತೆ ಅವರ ಸ್ನೇಹಿತರು ಉಳಿದುಕೊಂಡಿದ್ದರು. ಮದಿರೆ ನಶೆ, ಮಾನಿನಿಯರ ಸಂಘದಲ್ಲಿ ಮೈಮರೆತ್ತಿದ್ದ ಈ ಗುಂಪು ಒಮ್ಮೆಗೆ ಪೊಲೀಸರನ್ನು ಕಂಡು ಬೆಚ್ಚು ಬಿದ್ದಿದೆ. ರಘುವೀರ್ ಇಂದು ಸಂಜೆವರೆಗೂ ನ್ಯಾಯಾಂಗ ಬಂಧನದಲ್ಲಿರಿಸಲಾಗುವುದು ಎಂದು ಇನ್ಸ್ ಪೆಕ್ಟರ್ ರಾಜಣ್ಣ ಹೇಳಿದ್ದಾರೆ.

  ಬೆಂಗಳೂರಿನಲ್ಲಿ ವೇಶ್ಯಾವೃತ್ತಿಯಲ್ಲಿ ತೊಡಗಿರುವ ಪೂರ್ಣಿಯಾ, ಗೀತಪ್ರಿಯ ಅವರನ್ನು ಹಣಕೊಟ್ಟು ಮೈಸೂರಿಗೆ ಕರೆಸಿಕೊಳ್ಳಲಾಗಿತ್ತು. ಕಳೆದ ರಾತ್ರಿ ಕುಡಿಯಲು ಶುರು ಮಾಡಿದ ರಘುವೀರ್ ಬೆಳಗ್ಗೆವರೆಗೂ ಕುಡಿತ ಮುಂದುವರೆಸಿದ್ದಾರೆ. ಪೊಲೀಸರು ಬಂದು ಬಂಧಿಸಿದರೂ ಅದರ ಅರಿವು ಅವರಿಗಿರಲ್ಲ. ರಘುವೀರ್ ಅವರ ಸ್ನೇಹಿತ ಶಂಕರ್, ಕಾರು ಡ್ರೈವರ್ ಅನ್ನು ಸೆರೆ ಹಿಡಿಯಲಾಗಿದೆ ಎಂದು ಇನ್ಸ್ ಪೆಕ್ಟರ್ ರಾಜಣ್ಣ ಹೇಳಿದರು.

  ಚೈತ್ರದ ಪ್ರೇಮಾಂಜಲಿ, ಶೃಂಗಾರ ಕಾವ್ಯ ಮುಂತಾದ ಚಿತ್ರಗಳ ನಂತರ ಹಲವು ವರ್ಷಗಳ ಕಾಲ ರಘುವೀರ್ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಆದರೆ, ಇತ್ತೀಚೆಗೆ ಮತ್ತೆ ಬಣ್ಣ ಹಚ್ಚಿ, ಉಯ್ಯಾಲೆ ಎಂಬ ಚಿತ್ರದಲ್ಲಿ ನಟಿಸಿದ್ದರು. ಆದರೆ, ಸಾಂಸಾರಿಕ ತೊಂದರೆಯಿಂದಾಗಿ ಕೆಲ ವರ್ಷಗಳಿಂದ ಮದ್ಯ ವ್ಯಸನಿಯಾಗಿದ್ದ ರಘುವೀರ್, ಲೈಂಗಿಕತೆಗಾಗಿ ವೇಶ್ಯಾವೃತ್ತಿಯಲ್ಲಿರುವ ಯುವತಿಯರ ಹಿಂದೆ ಬಿದ್ದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.[ರಘುವೀರ್]

  English summary
  Kannada Actor Raghuveer and five others charged with prostitution by Lashkar Police in Mysore. On Thursday night the actor was found playing with prostitutes in inebriated position in Abhishek Lodge, Mysore. A case has been registered and the group was sent to judicial custody.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X