For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆ ಹಾದಿಯಲ್ಲಿ ಓಂ ಪ್ರಕಾಶ್ ರಾವ್ ಎಕೆ 56

  By Rajendra
  |

  ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಬರುತ್ತಿರುವ 'ಎಕೆ 56' ಚಿತ್ರಕ್ಕೆ ಕಡೆಗೂ ಬಿಡುಗಡೆ ಭಾಗ್ಯ ಲಭಿಸಿದೆ. ಭಾರಿ ಬಜೆಟ್ ಚಿತ್ರ ಇದಾಗಿದ್ದು ಕೋಟಿಗಟ್ಟಲೆ ಹಣ ಸುರಿಯಲಾಗಿದೆ. ಓಂ ಪ್ರಕಾಶ್ ರಾವ್ ನಿರ್ದೇಶನದ ಮೂಡಿಬರುತ್ತಿರುವ 25ನೇ ಕೊಡುಗೆ ಇದು.

  ಡಾ.ಸಿದ್ಧಾರ್ಥ್ ಹಾಗೂ ಶೆರಿನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ವೆಂಕಟೇಶ್ ಬಾಬು ಹಾಗೂ ಗೋವಿಂದರಾಜು ನಿರ್ಮಿಸಿದ್ದಾರೆ. ಫೆಬ್ರವರಿಯಲ್ಲಿ ತೆರೆಗೆ ತರುವ ಪ್ರಯತ್ನಗಳು ಚುರುಕಾಗಿ ನಡೆಯುತ್ತಿವೆ. ಇದೊಂದು ಆಕ್ಷನ್ ಪ್ರಧಾನ ಚಿತ್ರವಾಗಿದ್ದು ದೇಶಭಕ್ತಿ ಸಾರುವ ಕತೆಯನ್ನು ಒಳಗೊಂಡಿದೆ ಎನ್ನುತ್ತವೆ ಮೂಲಗಳು.

  ಈ ಚಿತ್ರದಲ್ಲಿ ಹೆಲಿಕಾಪ್ಟರ್‌, ನಾಲ್ಕು ಚಕ್ರ, ದ್ವಿಚಕ್ರ ವಾಹನಗಳ ಭಾರಿ ಚೇಸಿಂಗ್ ಇದ್ದು ಪ್ರೇಕ್ಷಕರ ಕಣ್ಣಿಗೆ ಹಬ್ಬ ಎನ್ನುತ್ತಾರೆ ಚಿತ್ರದ ನಿರ್ಮಾಪಕರು. ಚಿತ್ರದ ನಾಯಕ ನಟ ಬ್ಯಾಸ್ಕೆಟ್ ಬಾಲ್ ಆಟಗಾರನಾಗಿ ಹಾಗೂ ನಾಯಕಿ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಲಿದ್ದಾರೆ. (ಏಜೆನ್ಸೀಸ್)

  English summary
  N Om Prakash Rao's upcoming film AK 56 will hit the screens in February. Dr. Siddanth and Sherin in the lead roles. Sources state that AK 56 would be a complete action film that would have fiery action sequences.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X