»   » ಶಿಲ್ಪಾ ಶೆಟ್ಟಿ ವೈಭವೋಪೇತ ಮದುವೆ ವಿಡಿಯೋ

ಶಿಲ್ಪಾ ಶೆಟ್ಟಿ ವೈಭವೋಪೇತ ಮದುವೆ ವಿಡಿಯೋ

Subscribe to Filmibeat Kannada

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗೋಧೂಳಿ ಸಮಯದಲ್ಲಿ(ನ.22) ರಾಜ್ ಕುಂದ್ರಾ ಕೊರಳಿಗೆ ಮಾಲೆ ಹಾಕಿದ್ದು, ಸಪ್ತಪದಿ ತುಳಿದಿದ್ದು, ಕರಾವಳಿಯ ಕೊಂಬು ಕಹಳೆಗಳು ಮೊಳಗಿದ್ದು... ವಿಡಿಯೋದಲ್ಲಿ ನೋಡಿ ಆನಂದಿಸಿ. ಮುಂಬೈನ ಖಂಡಾಲದಲ್ಲಿನ ಬಾವಾ ಫಾರ್ಮ್ ಹೌಸ್ ಶಿಲ್ಪಾ ಳ ವೈಭವೋಪೇತ ಮದುವೆಗೆ ಸಾಕ್ಷಿಯಾಗಿತ್ತು.

ಬ್ಯಾಂಡ್, ವಾದ್ಯಗೋಷ್ಠಿಗಳ ಹಿಮ್ಮೇಳದಲ್ಲಿ ಅಗ್ನಿ ಸಾಕ್ಷಿಯಾಗಿ ಶಿಲ್ಪಾ ಶೆಟ್ಟಿ ಮದುವೆ ನಡೆಯಿತು. ರು.50 ಲಕ್ಷ ಮೌಲ್ಯದ ಜರತಾರಿ ಸೀರೆ, ರು.3ಕೋಟಿ ಬೆಲೆಬಾಳುವ ಆಭರಣ, ಜಡೆಯನ್ನು ಅಲಂಕರಿಸಿದ್ದ ಉಡುಪಿ ಶಂಕರಪುರ ಮಲ್ಲಿಗೆ ಅಲಂಕಾರದಲ್ಲಿ ಶಿಲ್ಪಾ ನಳನಳಿಸುತ್ತಿದ್ದರು.

ಬಂಟರ ಶೈಲಿಯಲ್ಲಿ ಸಂಜೆ 6.30 ಗೋಧೂಳಿಲಗ್ನದಲ್ಲಿ ಸುನಂದಾ, ಸುರೇಂದ್ರ ದಂಪತಿ ಮಗಳು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಕೈಗೆ ಕಲಶದ ಧಾರೆ ಎರೆದರು. ಸಂಜೆ 4 ಗಂಟೆಯಿಂದ ಖಂಡಾಲ ದೇವಸ್ಥಾನದಿಂದ ಮದುವೆ ದಿಬ್ಬಣ ಹೊರಟಿತ್ತು. ಮದುವೆ ಮಂಟಪದಲ್ಲಿ ಮಂಗಳೂರು ಮಲ್ಲಿಗೆ ಪರಿಮಳ ಘಮಘಮಿಸುತ್ತಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada