»   » ಸುದೀಪ್ ಆಕ್ಷನ್, ಕಟ್ ನಲ್ಲಿ ನೂತನ ಚಿತ್ರ

ಸುದೀಪ್ ಆಕ್ಷನ್, ಕಟ್ ನಲ್ಲಿ ನೂತನ ಚಿತ್ರ

Posted By:
Subscribe to Filmibeat Kannada

ಶಂಕರ್ ಪ್ರೊಡಕ್ಷನ್ಸ್‌ನ ಮೂರನೇ ಕಾಣಿಕೆ, ಆರ್.ಶಂಕರ್ ನಿರ್ಮಾಣದ ನೂತನ ಚಿತ್ರ ಫೆಬ್ರವರಿ 25ರಿಂದ ಆರಂಭವಾಗಲಿದೆ. ಈ ಸಂಸ್ಥೆಯಿಂದ ನಿರ್ಮಾಣವಾಗಿರುವ ಸುದೀಪ್ ಅಭಿನಯ ಹಾಗೂ ನಿರ್ದೇಶನದ 'ಜಸ್ಟ್‌ಮಾತ್‌ಮಾತಲ್ಲಿ' ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ.

ಇನ್ನೂ ಹೆಸರಿಡದ ಈ ಹೊಸ ಚಿತ್ರದಲ್ಲಿ ಸುದೀಪ್ ನಾಯಕರಾಗಿ ನಟಿಸುತ್ತಿದ್ದಾರೆ. ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಶ್ರೀವೆಂಕಟ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಘುದೀಕ್ಷಿತ್ ಸಂಗೀತ ಸಂಯೋಜಿಸುತ್ತಿದ್ದಾರೆ. ಐದು ಹಾಡುಗಳನ್ನೊಳಗೊಂಡಿರುವ ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು ಹಾಗೂ ರಾಮನಗರದಲ್ಲಿ ನಡೆಯಲಿದೆ. ಕೆಂಪರಾಜ್ ಸಂಕಲನ, ಹರ್ಷ ನೃತ್ಯ ನಿರ್ದೇಶನವಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ದೇವರಾಜ್, ಶೃತಿ, ಶ್ರೀಧರ್, ಲೋಹಿತಾಶ್ವ, ಅರುಣ್‌ಸಾಗರ್, ಯತಿರಾಜ್ ಮುಂತಾದವರಿದ್ದಾರೆ. ನಾಯಕಿಯ ಆಯ್ಕೆ ಪ್ರಗತಿಯಲ್ಲಿದೆ.

ಗೌತಮ್‌ಮೆನನ್ ನಿರ್ದೇಶನದಲ್ಲಿ ಸೂರ್ಯ ಹಾಗೂ ಜ್ಯೋತಿಕಾ ಅಭಿನಯಿಸಿದ ಭರ್ಜರಿ ಯಶಸ್ಸು ಕಂಡ 'ಕಾಕಾ ಕಾಕಾ ತಮಿಳು ಚಿತ್ರದ ಹಕ್ಕನ್ನು ಪಡೆದಿರುವ ಆರ್.ಶಂಕರ್ ಅವರು ಮಾರ್ಚ್ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada