»   » ಮಂತ್ರಿಮಾಲ್ನಲ್ಲಿ ಮಾಜಿಮುಖ್ಯಮಂತ್ರಿ ಸಿನೆಮಾ ಕಹಾನಿ

ಮಂತ್ರಿಮಾಲ್ನಲ್ಲಿ ಮಾಜಿಮುಖ್ಯಮಂತ್ರಿ ಸಿನೆಮಾ ಕಹಾನಿ

Posted By: * ಶಾಂತಲಾ ಪಾಂಡುರಂಗಿ, ಬೆಂಗಳೂರು
Subscribe to Filmibeat Kannada
Yeddyurappa watches Kannada movie Prasad
ಅವರಿದ್ದದ್ದು ಐದೇ ಜನ. ಯಜಮಾನ, ಇಬ್ಬರು ಹೆಣ್ಮಕ್ಕಳು, ಒಬ್ಬ ಮಗ ಮತ್ತೊಬ್ಬ. ಅವರ ಸುತ್ತಲೂ ಇದ್ದದ್ದು 15 ಭದ್ರತಾ ಸಿಬ್ಬಂದಿಗಳು. ಬೆಂಗಳೂರಿನ ಜನನಿಬಿಡ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್‌ನೊಳಗೆ ಕಾಲಿಡುತ್ತಿದ್ದಂತೆ ಟಕ್ ಟಕ್ ಭದ್ರತಾ ಸಿಬ್ಬಂದಿಗಳ ಬೂಟಿನ ಸದ್ದಿನ ಹೊರತಾಗಿ ಎಲ್ಲೆಲ್ಲೂ ಬಿಗಿಮೌನ. ಯಾಜಮಾನ ಯಾರೆಂದು ಗೊತ್ತಿದ್ದವರಿಗೆ ಕುತೂಹಲ, ಗೊತ್ತಿಲ್ಲದವರಿಗೂ ಒಂದು ಬಗೆಯ ಅಚ್ಚರಿ.

ಈ ತರಹ ಕುತೂಹಲ ಮತ್ತು ಅಚ್ಚರಿಯನ್ನು ಹುಟ್ಟುಹಾಕಿದವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ. ಅಧಿಕಾರ ಇರಲಿ ಇಲ್ಲದಿರಲಿ, ಕುಟುಂಬದವರನ್ನೆಲ್ಲಾ ಒಟ್ಟುಗೂಡಿಸಿಕೊಂಡು ವಿದೇಶ ಪ್ರಯಾಣ ಮಾಡುವುದನ್ನು, ಹೊಸ ಕನ್ನಡ ಚಿತ್ರ ಬಂದಾಗ ಪಟಾಲಂ ಕಟ್ಟಿಕೊಂಡು ಸಿನೆಮಾ ನೋಡುವುದನ್ನು ಯಡಿಯೂರಪ್ಪ ಯಾವತ್ತೂ ಮಿಸ್ ಮಾಡಿಕೊಳ್ಳುವುದಿಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಲೈಫು ಇಷ್ಟೇನೆ ಚಿತ್ರವನ್ನೂ ನೋಡಿದ್ದರು.

ದೆಹಲಿಯಲ್ಲಿ ಹೈಕಮಾಂಡಿನಿಂದ 'ಪ್ರಸಾದ' ಸಿಗದಿದ್ದರೇನಂತೆ, ಯಡಿಯೂರಪ್ಪನವರು ತಮ್ಮೆಲ್ಲ ರಾಜಕೀಯ ಜಂಜಡಗಳನ್ನೆಲ್ಲ ಬದಿಗಿಟ್ಟು ಮಂತ್ರಿ ಮಾಲಿಗೆ ತಮ್ಮಿಬ್ಬರು ಹೆಣ್ಣುಮಕ್ಕಳಾದ ಅರುಣಾ ಮತ್ತು ಉಮಾ, ಪಕ್ಕದಲ್ಲಿ ಮಗ ವಿಜಯೇಂದ್ರರ ಜೊತೆಗೂಡಿ, ಅಶೋಕ್ ಖೇಣಿ ನಿರ್ಮಾಣದ, ಖ್ಯಾತ ನಟ ಅರ್ಜುನ್ ಸರ್ಜಾ ಅಭಿನಯಿಸಿದ 'ಪ್ರಸಾದ್' ಕನ್ನಡ ಚಿತ್ರ ಭಾನುವಾರ ಸಂಜೆ 7 ಗಂಟೆಗೆ ನೋಡಲು ಬಂದಿದ್ದರು. ನಾನು ಮತ್ತು ನಮ್ಮೆಜಮಾನ್ರು ನೋಡಲು ಹೋಗಿದ್ದು ವಿದ್ಯಾ ಬಾಲನ್ ಅವರ 'ಕಹಾನಿ'.

ಥಿಯೇಟರ್ ಹೊರಗೆ ಮತ್ತು ಒಳಗೆ ಕರ್ನಾಟಕದ ಮಾಜಿ 'ಯಜಮಾನ್ರು' ಸೃಷ್ಟಿಸಿದ ಕಹಾನಿಯನ್ನೂ ಕೇಳಿಬಿಡಿ. ಯಡಿಯೂರಪ್ಪ ಬರುತ್ತಿದ್ದಂತೆ ಥಿಯೇಟರ್‌ನಲ್ಲಿನ ವಿಐಪಿ ಲಾಂಜಿಗೆ ಅವರನ್ನು ಕರೊದೊಯ್ಯಲಾಯಿತು. ಸುದ್ದಿ ತಿಳಿದು ಕ್ಯಾಮೆರಾ, ಪೆನ್ನು ಪೇಪರು ಹಿಡಿದು ಬಂದಿದ್ದ ಪತ್ರಕರ್ತರನ್ನು ನಯವಾಗಿಯೇ ದೂರ ಸರಿಸಲಾಯಿತು. ಅಷ್ಟಾದರೂ ಖಾಸಗಿ ಕ್ಷಣಗಳನ್ನು ಯಡಿಯೂರಪ್ಪನವರು ಕಳೆಯಬೇಡವೆ?

ನಂತರ, ಭದ್ರತಾ ಸಿಬ್ಬಂದಿಗಳು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ ಮೇಲೆ ಸಿನೆಮಾ ಹತ್ತು ನಿಮಿಷ ತಡವಾಗಿ ಶುರುವಾಯಿತು. ಸೆಕ್ಯೂರಿಟಿ ಸಿಬ್ಬಂದಿಯವರ ಕಲರವದ ಹೊರತಾಗಿ ಮತ್ತೆಲ್ಲವೂ ಶಾಂತವಾಗಿತ್ತು. ಕಾವಲು ಪಡೆ ಮಾತ್ರ ಮೈಯೆಲ್ಲ ಕಣ್ಣಾಗಿತ್ತು. ಯಡಿಯೂರಪ್ಪನವರು ಬಂದರು, ಸಿನೆಮಾ ನೋಡಿದರು, ಬಿಟ್ಟನಂತರ ಮುಖ್ಯ ದ್ವಾರದ ಮುಖಾಂತರ ಹೊರನಡೆದರು. ಉಳಿದ ಪ್ರೇಕ್ಷಕರು ಮಾತ್ರ ಹಿಂಬದಿಯ ಬಾಗಿಲಿನಿಂದ ಹೊರಬರಬೇಕಾಯಿತು. ಇದಿಷ್ಟು ಯಡಿಯೂರಪ್ಪನವರು ಸಿನೆಮಾ ನೋಡಿದ ಕಹಾನಿ.

English summary
Former CM of Karnataka BS Yeddyurappa watches Kannada movie Prasad at Mantri Mall in Malleshwara on Sunday. As soon as he came whole area was cordened off by the 15 security men and theater authorities. The show was delayed by 10 minutes.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X