For Quick Alerts
  ALLOW NOTIFICATIONS  
  For Daily Alerts

  ಟಿವಿ ನಿರ್ದೇಶಕ ಹಿರಿಯೂರು ರಾಘವೇಂದ್ರ ಆತ್ಮಹತ್ಯೆಗೆ ಯತ್ನ

  By Rajendra
  |

  ಕಿರುತೆರೆ ನಿರ್ದೇಶಕ ಹಿರಿಯೂರು ರಾಘವೇಂದ್ರ ಅವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಗ್ರೀನ್ ಹೌಸ್‌ನಲ್ಲಿ ಶನಿವಾರ (ಜೂ.25) ನಡೆದಿದೆ. ಇಂದು ಅವರು ತಮ್ಮ ನಿರ್ದೇಶನದ 'ಕಾರ್ತೀಕ ದೀಪ' (ಉದಯ ವಾಹಿನಿ) ಧಾರಾವಾಹಿಯ ಪತ್ರಿಕಾಗೋಷ್ಠಿ ಕರೆದಿದ್ದರು.

  ಪತ್ರಿಕಾಗೊಷ್ಠಿ ಆರಂಭವಾಗುವುದಕ್ಕೂ ಮುನ್ನ ರಾಘವೇಂದ್ರ ಅವರು ಕುಸಿದುಬಿದ್ದರು. ಏನಾಯಿತು ಎಂದು ನೋಡುವಷ್ಟರಲ್ಲಿ ಅವರು ಅರೆಪ್ರಜ್ಞಾವಸ್ಥೆಗೆ ಜಾರಿದರು. ಬಳಿಕ ಅವರ ಕೈಯಲ್ಲಿ ಡೆತ್‌ ನೋಟ್ ನೋಡಿದ ಮೇಲೆ ಇದು ಆತ್ಮಹತ್ಯೆ ಯತ್ನ ಎಂದು ಗೊತ್ತಾಗಿದೆ.

  ಕೂಡಲೆ ಅವರನ್ನು ನಗರದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿಗೋಷ್ಠಿಗೂ ಮುನ್ನ ರಾಘವೇಂದ್ರ ಅವರು ನಿದ್ರೆ ಮಾತ್ರೆ ಸೇವಿಸಿ ಬಂದಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಕಿರುತೆರೆ ಕಲಾವಿದರ ಕಿರುಕುಳ ತಾಳಲಾರದೆ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದು ಸದ್ಯದ ಮಾಹಿತಿ. (ದಟ್ಸ್‌‍ಕನ್ನಡ ಸಿನಿವಾರ್ತೆ)

  English summary
  Kannada small screen director Hiriyur Raghavendra today allegedly attempted to commit suicide by consuming sleeping tablets. Hiriyur Raghavendra known for Karthika Deepa serial, was rushed to a private hospital and is out of danger, hospital sources said.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X