»   »  'ಮಳೆಯಲಿ ಜೊತೆಯಲಿ' ಚಿತ್ರಕ್ಕೆ ಗಣೇಶನ ರಾಗ

'ಮಳೆಯಲಿ ಜೊತೆಯಲಿ' ಚಿತ್ರಕ್ಕೆ ಗಣೇಶನ ರಾಗ

Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಗಾಯಕರಾಗಿ ಬದಲಾಗಿದ್ದಾರೆ! ತಮ್ಮದೇ ನಿರ್ಮಾಣದ 'ಮಳೆಯಲಿ ಜೊತೆಯಲಿ' ಚಿತ್ರಕ್ಕಾಗಿ ಅವರು ಹಾಡೊಂದನ್ನು ಹಾಡಿದ್ದಾರೆ.ಮಳೆಯಲಿ ಜೊತೆಯಲಿ ಚಿತ್ರದ ನಾಯಕನನ್ನು ಪರಿಚಯಿಸುವ ಈ ಹಾಡಿಗೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ತಮ್ಮ ಹತ್ತು ವರ್ಷಗಳ ಸಿನಿ ವೃತ್ತಿ ಜೀವನದಲ್ಲಿ ಗಣೇಶ್ ನಟಿಸುತ್ತಿರುವ 25ನೇ ಚಿತ್ರ ಇದಾಗಿದೆ. ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸುತ್ತಿರುವ 12ನೇ ಚಿತ್ರ 'ಮಳೆಯಲಿ ಜೊತೆಯಲಿ'. ಈ ಹಿಂದೆ ಗಣೇಶ್ ನಟಿಸಿದ ಚಿತ್ರಗಳು ಬಾಕ್ಸಾಫೀಸಲ್ಲಿ ಆರೆಕ್ಕೇರಿಲ್ಲ ಮೂರಕ್ಕೆ ಇಳಿದಿಲ್ಲ. ಹಾಗಾಗಿ ಗಣೇಶ್ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಲ್ಲಿದ್ದಾರೆ.

ಗಣೇಶ್ ರ ಹೆಂಡತಿ ಶಿಲ್ಪಾ ಈ ಚಿತ್ರದ ನಿರ್ಮಾಪಕಿ. ಗಣೇಶ್ ರ ಹುಟ್ಟುಹಬ್ಬದ ದಿನ ಜುಲೈ 2ರಂದು 'ಮಳೆಯಲಿ ಜೊತೆಯಲಿ' ಚಿತ್ರ ಸೆಟ್ಟೇರಲಿದೆ. ಗಣೇಶ್ ತಂಡ ಮತ್ತೊಂದು ಮುಂಗಾರು ಮಳೆ ಕನಸಿನಲ್ಲಿದೆ. ಈ ದಿಶೆಯಲ್ಲಿ ನಿರ್ದೇಶಕ ಪ್ರೀತಂ ಗುಬ್ಬಿ, ಸಂಕಲನಕಾರ ದೀಪು ಮತ್ತು ಛಾಯಾಗ್ರಾಹಕ ಕೃಷ್ಣ ಅವರ ಪ್ರಯತ್ನ ಮುಂದುವರೆದಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada