»   »  ಸರಕಾರಕ್ಕೆ ಕನ್ನಡಚಿತ್ರೋದ್ಯಮದ ಬಾಗಿನ!

ಸರಕಾರಕ್ಕೆ ಕನ್ನಡಚಿತ್ರೋದ್ಯಮದ ಬಾಗಿನ!

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮ್ಮಿಕೊಂಡ ಕರ್ನಾಟಕದ ಘನ ಸರಕಾರವನ್ನು ಅಭಿನಂದಿಸಬೇಕು ಎಂಬುದು ಚಲನಚಿತ್ರ ವಾಣಿಜ್ಯ ಮಂಡಳಿಯ ಬಹುದಿನಗಳ ತುಡಿತ. ಇದೀಗ ಆ ಮಿಡಿತ ಈಡೇರುವ ಸಮಯ ಹತ್ತಿರವಾಗಿದೆ. ಮಂಗಳವಾರ ಸಂಜೆ ಒಂದು ಗಂಟೆ ಕಾಲಾವಧಿಯ ಹಾಡಿನ ಪ್ರದರ್ಶನದ ಮೂಲಕ ಸರಕಾರಕ್ಕೆ ಕೃತಜ್ಞತೆ ತಿಳಿಸಲಿದೆ. ಇದಕ್ಕಾಗಿ ಬೆಂಗಳೂರಿನ ಅರಮನೆ ಆವರಣ ಸಿಂಗಾರಗೊಂಡಿದೆ. ಸರಕಾರಕ್ಕೆ ಬಾಗಿನ ಅರ್ಪಿಸಲು ವೇದಿಕೆ ಸಿದ್ಧವಾಗಿದೆ.

ಸರಕಾರ ಕೈಗೊಂಡ ಈ ಎಲ್ಲಾ ಕಾರ್ಯಗಳನ್ನು ಸ್ವಾಗತಿಸಿ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳನ್ನು ತಿಳಿಸಲು ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕನ್ನಡ ಚಿತ್ರದ್ಯೋಮಕ್ಕೆ ಸರಕಾರ ನೀಡಿರುವುದು ಸಣ್ಣ ಕೊಡುಗೆಯೇನಲ್ಲ. ಅಭಿನಂದನಾ ಕಾರ್ಯಕ್ರಮದಲ್ಲಿ ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್ ರಾಜ್ ಕುಮಾರ್, ಪೂಜಾಗಾಂಧಿ, ರಾಧಿಕಾ ಪಂಡಿತ್, ಶರ್ಮಿಳಾ ಮಾಂಡ್ರೆ,ಐಂದ್ರಿತಾ ರೇ, ಯಶ್, ಚಿರಂಜೀವಿ ಸರ್ಜಾ, ನೀತು, ನಿಧಿ ಸುಬ್ಬಯ್ಯ, ಅನಿರುದ್ಧ ಸೇರಿದಂತೆ 40ಕ್ಕೂ ಅಧಿಕ ಕಲಾವಿದರು ಭಾಗವಹಿಸಲಿದ್ದಾರೆ.

ಒಂದು ಗಂಟೆ ಕಾಲಾವಧಿಯ ಈ ಕಾರ್ಯಕ್ರಮವನ್ನ್ನು ನಟ, ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶಿಸಿರುವುದು ವಿಶೇಷ. ನಟರಾದ ದರ್ಶನ್, ಗಣೇಶ್ ಈ ಅಭಿನಂದನಾ ಕಾರ್ಯಕ್ರಮದ ತಾಲೀಮಿನ ವಿಡಿಯೋದಲ್ಲಿ ಇಲ್ಲದಿರುವುದು ಹಲವಾರು ಅನುಮಾನುಗಳನ್ನ್ನು ಹುಟ್ಟಿಸಿದೆ.

ಇದೊಂದು ಕೇವಲ ಮನರಂಜನಾ ಕಾರ್ಯಕ್ರಮವಷ್ಟೇ ಅಲ್ಲ. ಪೈರಸಿಯನ್ನು ತಡೆಯಲು ಗೂಂಡಾ ಕಾಯಿದೆಯನ್ನ್ನು ಜಾರಿಗೆ ತಂದು ಶ್ರೀಸಾಮಾನ್ಯರಲ್ಲಿ ಅರಿವು ಮೂಡಿಸಿದ್ದು ದೊಡ್ಡ ಸಾಧನೆಯೇ. ಪೈರಸಿಯಿಂದ ಜನ ಏಕೆ ದೂರವಿರಬೇಕು ಎಂಬುದನ್ನ್ನು ಸಂದೇಶಾತ್ಮಕವಾಗಿ ತೋರಿಸಲಾಗುತ್ತದೆ ಎನ್ನುತ್ತಾರೆ ರಮೇಶ್ ಅರವಿಂದ್.

ಆಮಂತ್ರಣ ಪತ್ರ ಇದ್ದವರಿಗೆ ಮಾತ್ರ ಈ ಅದ್ದೂರಿ ಕಾರ್ಯಕ್ರಮಕ್ಕೆ ಆಹ್ವಾನ. ಚಿತ್ರೋದ್ಯಮದ 3,000 ಮಂದಿ ಸೇರಿದಂತೆ ಸರಕಾರ ಮತ್ತು ಮಾಧ್ಯಮದವರಿಗೆ ಆಹ್ವಾನ ನೀಡಲಾಗಿದೆ. ಅಮೃತ ಮಹೋತ್ಸವದ ಪ್ರಸಾರ ಹಕ್ಕುಗಳನ್ನು ಮಾರಾಟ ಮಾಡಿದಂತೆ ಈ ಕಾರ್ಯಕ್ರಮದ ಹಕ್ಕುಗಳನ್ನು ಯಾವುದೇ ಟಿವಿ ವಾಹಿನಿಗೆ ಮಾರಾಟ ಮಾಡಿಲ್ಲ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ವಿ ಎಸ್ ಆಚಾರ್ಯ, ವಾರ್ತಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಸಾರಿಗೆ ಸಚಿವ ಆರ್ ಅಶೋಕ್, ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕಾನೂನು ಸಚಿವ ಸುರೇಶ್ ಕುಮಾರ್ ಅವರನ್ನು ಸನ್ಮಾನಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಆಹ್ವ್ವಾನವಿಲ್ಲ.

*ಆಡಿಯೋ ಮತ್ತು ವಿಡಿಯೋ ಪೈರಸಿ ತಡೆಗೆ ಗೂಂಡಾ ಕಾಯಿದೆ ಜಾರಿ,
*ಕನ್ನಡ ಚಿತ್ರೋದ್ಯಮದ 25 ವರ್ಷಗಳ ಬೇಡಿಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆ.
* ಸಂಕಷ್ಟದಲ್ಲಿರುವ ಚಲನಚಿತ್ರ ಕಾರ್ಮಿಕರು ಮತ್ತು ಕಲಾವಿದರ ನೆರೆವಿಗೆ ರು.2 ಕೋಟಿ ನಿಧಿ .
*ಚಿತ್ರೋದ್ಯಮಕ್ಕಾಗಿ ಅಮೃತ ಭವನ ನಿರ್ಮಾಣ
* ಮನರಂಜನೆ ತೆರಿಗೆಯಿಂದ ಎಲ್ಲಾ ಕನ್ನಡ ಚಿತ್ರಗಳು ಮುಕ್ತಗೊಳಿಸಿದ್ದು.
* ರಾಜ್ ಕುಮಾರ್ ಸಮಾಧಿ ಸ್ಥಳ ಅಭಿವೃದ್ಧಿಗೆ ಆರ್ಥಿಕ ನೆರವು
* ಸಬ್ಸಿಡಿ ಚಿತ್ರಗಳ ಸಂಖ್ಯೆಯನ್ನು 38ರಿಂದ 50ಕ್ಕೆ ಏರಿಕೆ... ಇವೆಲ್ಲಾ ಸಾಮಾನ್ಯ ಕೆಲಸಗಳೇ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada