»   »  ಕನ್ನಡಕ್ಕೆ ಮನಿಷಾ ಕೋಯಿರಾಲ, ಟುಲಿಪ್ ಜೋಷಿ!

ಕನ್ನಡಕ್ಕೆ ಮನಿಷಾ ಕೋಯಿರಾಲ, ಟುಲಿಪ್ ಜೋಷಿ!

Subscribe to Filmibeat Kannada

ಪ್ರತಾಪ್ ಗೌಡ ಅವರ 'ಮಾಣಿಕ್ಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹಲವು ಬಾಲಿವುಡ್ ತಾರೆಗಳ ಆಗಮನವಾಗುತ್ತಿದೆ. ಬಾಲಿವುಡ್ ತಾರೆಗಳಾದ ಮನಿಷಾ ಕೋಯಿರಾಲ, ಮಿಥುನ್ ಚಕ್ರವರ್ತಿ ಮತ್ತು ಟುಲಿಪ್ ಜೋಷಿ ಕನ್ನಡ ಚಿತ್ರದಲ್ಲಿ ನಟಿಸಲು ಅಂಗೀಕರಿಸಿದ್ದಾರಂತೆ.

ಕನ್ನಡದಲ್ಲಿ ಅತಿಥಿ ಪಾತ್ರ, ಐಟಂ ಹಾಡುಗಳಿಗೆ ಮಾತ್ರ ಸೀಮಿತವಾಗಿದ್ದರು ಬಾಲಿವುಡ್ ತಾರೆಗಳು. ಆದರೆ 'ಮಾಣಿಕ್ಯ' ಚಿತ್ರದ ಮೂಲಕ ಬಾಲಿವುಡ್ ತಾರೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ನಿರ್ದೇಶಕ ಪ್ರತಾಪ್ ಗೌಡ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ!

ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಟುಲಿಪ್ ಜೋಷಿ ನಟಿಸಲಿದ್ದಾರೆ. ಖಳ ನಟನಾಗಿ ನಟಿಸಲು ಮಿಥುನ್ ಚಕ್ರವರ್ತಿ ಒಪ್ಪಿಗೆ ಸೂಚಿಸಿದ್ದಾರೆ. ಹಾಗೆಯೇ ಪ್ರಮುಖ ಪಾತ್ರದಲ್ಲಿ ಮನಿಷಾಕೋಯಿರಾಲ ಸಹ ಕಾಣಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಮಾಣಿಕ್ಯ ಚಿತ್ರತಂಡ ಈ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ.

ಚಿತ್ರದಲ್ಲಿ ದೊಡ್ಡ ನಟರ ದಂಡೇ ಇದೆ. ಇದಕ್ಕಿಂತಲೂ ನಾನೇನು ಹೆಚ್ಚಿಗೆ ವಿವರ ನೀಡಲು ಸಾಧ್ಯವಿಲ್ಲ. ಕಾರಣ ನಮ್ಮ ನಿರ್ದೇಶಕ ಪ್ರತಾಪ್ ಗೌಡರು ಪ್ರೇಕ್ಷಕರನ್ನು ಚಕಿತಗೊಳಿಸಬೇಕೆಂದಿದ್ದಾರೆ ಎಂದಿದ್ದಾರೆ ಎನ್ನುತ್ತಾರೆ ಚಿತ್ರದ ನಾಯಕ ನಟ ಜೀವನ್ ಗೌಡ.ಅಂದಹಾಗೆ ಮಾಣಿಕ್ಯ ಚಿತ್ರ ಜುಲೈತಿಂಗಳಲ್ಲಿ ಸೆಟ್ಟೇರಲಿದೆಯಂತೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada