»   »  ಈ ವಾರ ನಂಯಜಮಾನ್ರು ಬರ್ತಿದ್ದಾರೆ

ಈ ವಾರ ನಂಯಜಮಾನ್ರು ಬರ್ತಿದ್ದಾರೆ

Posted By:
Subscribe to Filmibeat Kannada
Nam Yajamanru ready to Hit
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ನಂಯಜಮಾನ್ರು' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಮ್ಯ ತಾಣಗಳಲ್ಲಿ ಚಿತ್ರೀಕರಣ ಪೂರೈಸಿರುವ ಚಿತ್ರಕ್ಕೆ ಯು ಅರ್ಹತಾಪತ್ರವನ್ನು ನೀಡಿದ ಸೆನ್ಸಾರ್ ಮಂಡಲಿ ಮೆಚ್ಚುಗೆಯ ಮಾತುಗಳನ್ನಾಡಿದೆ.

27ವರ್ಷಗಳ ದೀರ್ಘಾವಧಿಯ ನಂತರ ನಿರ್ದೇಶಕ ನಾಗಾಭರಣ ಡಾ.ವಿಷ್ಣುವರ್ಧನ್ ಅಭಿನಯದ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಿಂದೆ ಇವರಿಬ್ಬರ ಸಂಗಮ 'ಬಂಗಾರದ ಜಿಂಕೆ' ಚಿತ್ರದಲ್ಲಾಗಿತ್ತು. ಉತ್ತಮ ಚಿತ್ರಗಳನ್ನು ಬಯಸುವ ಕನ್ನಡಿಗರಿಗೆ 'ನಂಯಜಮಾನ್ರು' ಮೆಚ್ಚುಗೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಬಿಡುಗಡೆಗೂ ಪೂರ್ವದಲ್ಲೇ ಜನಪ್ರಿಯವಾಗಿರುವ ಚಿತ್ರದ ಗೀತೆಗಳನ್ನು ಹಂಸಲೇಖ ಅವರೇ ರಚಿಸಿ ರಾಗ ಸಂಯೋಜಿಸಿದ್ದಾರೆ.

ನಂ ಯಜಮಾನ್ರು ಜತೆಗೆ ಮೂರು
ಕಾಶಿನಾಥ್ ಪುತ್ರ ಅಲೋಕ್ ನಟಿಸಿರುವ ಬಾಜಿ ಸಹ ಇದೇ ವಾರ ತೆರೆ ಕಾಣುತ್ತಿದೆ. ಕಳೆದ ವಾರವೇ ಬಿಡುಗಡೆಯಾಗಬೇಕಿದ್ದ ಎನ್. ಲೋಕಿ ನಿರ್ದೇಶನದ ತಬ್ಬಲಿ ಚಿತ್ರಮಂದಿರದ ಕೊರತೆಯ ಕಾರಣ ಈ ವಾರ ತೆರೆ ಕಾಣುತ್ತಿದೆ. ಈ ವಾರ ತೆರೆ ಕಾಣುತ್ತಿರುವ ಮತ್ತೊಂದು ಚಿತ್ರ ಶಂಕರ ಪುಣ್ಯಕೋಟಿ. ಮೂರು ಮತ್ತೊಂದು ಫಾರ್ಮುಲಾ ಗಾಂಧಿನಗರದಲ್ಲಿ ಮುಂದುವರೆದಿದೆ. ಈ ನಾಲ್ಕು ಚಿತ್ರಗಳು ತಮ್ಮ ಭವಿಷ್ಯವನ್ನು ಒಟ್ಟಿಗೆ ಪಣಕ್ಕೆ ಒಡ್ಡಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಚಿತ್ರಲೋಕದೊಳಗೆ ಹೊಸ ನಾಯಕ ಅಲೋಕ
ವಿಷ್ಣುವರ್ಧನ್ ಅವರ 201ನೇ ಚಿತ್ರ ದೊಡ್ಮನುಷ್ಯ!
ನಂಯಜಮಾನ್ರು ನಾಯಕಿ ನವ್ಯಾನಾಯರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada