Just In
Don't Miss!
- News
ಕರ್ನಾಟಕದಲ್ಲಿ 573 ಕೊರೊನಾ ಸೋಂಕಿತರು ಪತ್ತೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕ್ರೇಜಿಸ್ಟಾರ್ ಹುಟ್ಟುಹಬ್ಬದ ಕೊಡುಗೆ ಮಲ್ಲಿಕಾರ್ಜುನ
ತಮ್ಮ ಮಹತ್ವಾಕಾಂಕ್ಷಿ 'ಮಂಜಿನ ಹನಿ' ಬಿಡುಗಡೆಯಾದಗಲೆ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೆನೆ. ಅಲ್ಲಿವರೆಗೂ ಹುಟ್ಟುಹಬ್ಬ ಇಲ್ಲ ಎಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಖಡಕ್ ಆಗಿ ನುಡಿದಿದ್ದಾರೆ. ಅವರ 'ಮಂಜಿನ ಹನಿ' ಬಿಡುಗಡೆಗೂ ಮುನ್ನ ಅವರ ಹುಟ್ಟುಹಬ್ಬದ ಕೊಡೆಗೆಯಾಗಿ 'ಮಲ್ಲಿಕಾರ್ಜುನ' ಚಿತ್ರ ಬಿಡುಗಡೆಯಾಗುತ್ತಿದೆ, ಇದೇ ಮೇ. 27ರಂದು.
ಸಾಮಾನ್ಯವಾಗಿ ಕ್ರೇಜಿಸ್ಟಾರ್ ಚಿತ್ರಗಳೆಂದರೆ ಹೂ, ಹಣ್ಣು, ಒಂದಷ್ಟು ಬೆಡ್ ರೂಂ ದೃಶ್ಯಗಳು, ಸುಮಧುರ ಹಾಡುಗಳು, ಅದಕ್ಕೆ ತಕ್ಕಂತೆ ನಾಯಕಿಯ ಮೈಮಾಟ, ಬಿಂಕ, ಭಿನ್ನಾಣ, ಸೊಂಟದ ಕುಲುಕಾಟ, ಡಿಶುಂ ಡಿಶುಂ, ಒಂದಷ್ಟು ಗಾಜು, ಬಾಟಲಿಗಳು ಪೀಸ್ ಪೀಸ್ ಸಾಮಾನ್ಯ. ಮಲ್ಲಿಕಾರ್ಜುನ ಚಿತ್ರದಲ್ಲೂ ಅವರ ಅಭಿಮಾನಿಗಳು ಇವೆಲ್ಲವನ್ನೂ ನಿರೀಕ್ಷಿಸಬಹುದು. ಎಸ್.ಎಸ್ ಕಂಬೈನ್ಸ್ ಲಾಂಛನದಲ್ಲಿ ಡಿ.ರಾಜಕುಮಾರ್ ಅರ್ಪಿಸಿ, ದಿನೇಶ್‌ಗಾಂಧಿ ನಿರ್ಮಿಸಿರುವ ಚಿತ್ರ.
ಮುರಳಿಮೋಹನ್ ನಿರ್ದೇಶನದ ಈ ಚಿತ್ರದಲ್ಲಿ ರವಿಚಂದ್ರನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ನಾಯಕಿಯರಾಗಿ ಸೀತಾ ಹಾಗೂ ಸದಾಅಭಿನಯಿಸಿದ್ದಾರೆ. ರಮ್ಯಾಬಾರ್ನಾ, ಸುದೀಪ್‌ತೋ, ಆಶೀಷ್‌ವಿದ್ಯಾರ್ಥಿ, ಹೇಮಾಚೌಧರಿ, ಆದಿಲೋಕೇಶ್, ಎಂ.ಎನ್.ಲಕ್ಷ್ಮೀದೇವಿ, ರಾಜುತಾಳಿಕೋಟೆ, ದಿನೇಶ್‌ಗಾಂಧಿ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.
ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ, ಮನೋಹರ್ ಸಂಕಲನ ಹಾಗೂ ಎಸ್.ಎ.ರಾಜಕುಮಾರ್ ರವರ ಸಂಗೀತವಿರುವ 'ಮಲ್ಲಿಕಾರ್ಜುನ' ಚಿತ್ರಕ್ಕೆ ಕೆ.ಡಿ.ವೆಂಕಟೇಶ್ ಅವರ ಸಾಹಸ ನಿರ್ದೇಶನವಿದೆ. ಬೆಂಗಳೂರು, ಸಕಲೇಶಪುರ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಸಲಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)