ಶಿವಣ್ಣನಿಗೆ ಈಗ ಇನ್ನೂ ಇಬ್ಬರು ತಮ್ಮಂದಿರು

ಪವರ್ ಸ್ಟಾರ್ ಪುನೀತ್, ಶ್ರೀನಗರ ಕಿಟ್ಟಿ ಮತ್ತು ಲೂಸ್ ಮಾದ ಯೋಗೇಶ್ ಒಟ್ಟಾಗಿ ಅಭಿನಯಿಸಿದ್ದ ಹುಡುಗರು ಸೂಪರ್ ಹಿಟ್ ಆಯ್ತು. ಆ ಚಿತ್ರದ ನಿರ್ದೆಶಕ, ರೀಮೇಕ್ ಚಿತ್ರಗಳ ಸರದಾರ ಎಂಬ ಪ್ರಸಿದ್ಧಿಯ ಕೆ. ಮಾದೇಶ್ ಇದೀಗ ಹೊಸ ಚಿತ್ರವೊಂದನ್ನು ನಿರ್ದೆಶಿಸುತ್ತಿದ್ದಾರೆ. ಹೆಸರು ಅಣ್ಣ-ತಮ್ಮಂದಿರು. ಆದರೆ ಇದು ರೀಮೇಕ್ ಅಲ್ಲ, ಪಕ್ಕಾ ಸ್ವಮೇಕ್.
ಎಂ.ಎಸ್. ಅಭಿಷೇಕ್ ಕಥೆಗೆ ಕೆ.ವಿ. ರಾಜು ಸಂಭಾಷಣೆ ಬರೆದಿದ್ದಾರೆ. ಮಾದೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೀಮೇಕ್ ನಿರ್ದೆಶಕ ಪಟ್ಟದಿಂದ ಕೆಳಗಿಳಿಯಲು ಕೆ ಮಾದೇಶ್ ಪ್ರಯತ್ನಿಸುತ್ತಿದ್ದಾರಾ? ಇರಬಹುದು. ಯಾಕೆಂದರೆ ಅವರು ಈ ನಡುವೆ ಸ್ವಮೇಕ್ ಗೆ ಮೊರೆಹೋಗಿರುವುದೇ ಹೆಚ್ಚು. ಯೋಗಿ 'ಪ್ರೀತ್ಸೆ ಪ್ರೀತ್ಸೆ', ದುನಿಯಾ ವಿಜಯ್ 'ಕರಿ ಚಿರತೆ' ಮಾಡಿದ್ದಾರೆ. ಇದೀಗ ಡೆಡ್ಲಿ ಆದಿತ್ಯನ 'ರಾಸ್ಕಲ್' ಮುಗಿಸಿದ್ದಾರೆ. ಇವೆಲ್ಲವೂ ಸ್ವಮೇಕ್.
ಶಿವಣ್ಣ ಹಾಗೂ ರಾಧಿಕಾ ಜೋಡಿಯ 'ಅಣ್ಣ-ತಂಗಿ' ನಿರ್ಮಾಪಕ ಪ್ರಭಾಕರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ಅಣ್ಣ ತಮ್ಮಂದಿರ ಮಧ್ಯೆ ಹಳ್ಳಿಯೊಂದರಲ್ಲಿ ನಡೆಯುವ ಕಥೆ ಹೊಂದಿದೆ. ಇಲ್ಲಿ ಅಣ್ಣ ತಮ್ಮಂದಿರ ನಡುವಿನ ಪ್ರೀತಿ-ಮಮತೆಯೇ ಪ್ರಮುಖ ಪಾತ್ರ ವಹಿಸುತ್ತಿದ್ದು, ಆಕ್ಷನ್, ಸೆಂಟಿಮೆಂಟ್ ಮಿಶ್ರಣವಿದೆ. ವಿ. ಹರಿಕೃಷ್ಣ ಸಂಗೀತವಿದೆ. ಏಪ್ರಿಲ್ ನಲ್ಲಿ ಚಿತ್ರ ಸೆಟ್ಟೇರಲಿದೆ.


Click it and Unblock the Notifications











