»   » ಜನವರಿ 27ರಂದು ಚಿತ್ರನಟಿ ರಂಭಾ ನಿಶ್ಚಿತಾರ್ಥ

ಜನವರಿ 27ರಂದು ಚಿತ್ರನಟಿ ರಂಭಾ ನಿಶ್ಚಿತಾರ್ಥ

Posted By:
Subscribe to Filmibeat Kannada

ಭಾರತೀಯ ಚಿತ್ರರಂಗದ ಖ್ಯಾತ ತಾರೆ ರಂಭಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಜನವರಿ 27ರಂದು ಕೆನಡಾ ಮೂಲದ ಉದ್ಯಮಿ ಇಂದ್ರನ್(37)ರೊಂದಿಗೆ ರಂಭಾ ನಿಶ್ಚಿತಾರ್ಥ ನಡೆಯಲಿದೆ. ಚೆನ್ನೈನ ಪಂಚತಾರಾ ಹೋಟೆಲ್ ಪಾರ್ಕ್ ಶೆರಟಾನ್ ಇವರಿಬ್ಬರ ಮದುವೆ ನಿಶ್ಚಿತಾರ್ಥಕ್ಕೆ ಸಿಂಗಾರವಾಗಿದೆ.

ರಂಭಾ ಮದುವೆ ನಿಶ್ಚಿತಾರ್ಥ ತುಂಬಾ ಅದ್ದೂರಿಯಾಗಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು ಹಾಗೂ ವಾಣಿಜ್ಯೋದ್ಯಮಿಗಳನ್ನು ಆಹ್ವಾನಿಸಲಾಗಿದೆ. ನಿಶ್ಚಿತಾರ್ಥಕ್ಕೆ ಮಾಧ್ಯಮದವರಿಗೆ ಆಹ್ವಾನವಿಲ್ಲ. ಮಾಧ್ಯಮಗಳನ್ನು ಉದ್ದೇಶಿಸಿ ರಂಭಾ ಅವರು ಪ್ರತ್ಯೇಕವಾಗಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಂಭಾಗೆ ಇಂದ್ರನ್ ಈ ಹಿಂದೆ ಬೆಲೆಬಾಳುವ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಳಿ ಮತ್ತು ಭೋಜ್ ಪುರಿ ಭಾಷೆಗಳಲ್ಲಿ ರಂಭಾ ನಟಿಸಿದ್ದಾರೆ.

ಕನ್ನಡದಲ್ಲಿ ಅನಾಥರು, ಸಾಹುಕಾರ, ಗಂಡುಗಲಿ ಕುಮಾರರಾಮ, ಪಾಂಡುರಂಗ ವಿಠಲ, ಭಾವ ಭಾಮೈದ, ಓ ಪ್ರೇಮವೆ, ಸರ್ವರ್ ಸೋಮಣ್ಣ ಚಿತ್ರಗಳಲ್ಲಿ ರಂಭಾ ಅಭಿನಯಿಸಿದ್ದಾರೆ. ರಂಭಾ ಮದುವೆ ಸುದ್ದಿಯನ್ನು ಸ್ವತಃ ಅವರ ಸಹೋದರ ಖಚಿತಪಡಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada