For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಕಪ್: ಕೋಬ್ರಾಸ್ ಹಲ್ಲು ಕಿತ್ತ ಕಿಚ್ಚ ಸುದೀಪ್

  By Rajendra
  |

  ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 'ಡಾ.ರಾಜ್ ಕಪ್' ಪ್ರೇಕ್ಷಕರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ. ಮೊದಲ ಪಂದ್ಯ ಕಿಚ್ಚ 11 Vs ಥ್ರಿಲ್ಲರ್ ಕೋಬ್ರಾಸ್ ಮತ್ತು ಲೆನ್ಸ್ ಕಿಂಗ್ಸ್ Vs ಲೆಜಿಸ್ಲೇಟಿವ್ ಲಯನ್ಸ್ ನಡುವೆ ನಡೆಯಿತು. ರಸವತ್ತಾಗಿ ನಡೆದ ಪಂದ್ಯಗಳು ಪ್ರೇಕ್ಷಕರ ಪಾಲಿಗೆ ಮರೆಯಲಾರದ ಅನುಭವ ನೀಡಿದೆ.

  ಟಾಸ್ ಗೆದ್ದು ಬ್ಯಾಟ್ ಆಯ್ಕೆ ಮಾಡಿಕೊಂಡ ಕಿಚ್ಚ 11 ತಂಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ದಾಖಲೆಯ 225 ರನ್ ಗಳನ್ನು ಕಲೆಹಾಕಿತು. ಕಿಚ್ಚ ಸುದೀಪ್ 93 ರನ್ ಗಳನ್ನು ಕಲೆ ಹಾಕುವ ಮೂಲಕ ತಾವೊಬ್ಬ ಉತ್ತಮ ಕ್ರಿಕೆಟ್ ಪಟು ಎಂಬುದನ್ನು ಸಾಬೀತು ಪಡಿಸಿದರು.

  ಬಳಿಕ ಕಣಕ್ಕಿಳಿದ ಥ್ರಿಲ್ಲರ್ ಕೋಬ್ರಾಸ್ ಆಟ ನಡೆಯಲಿಲ್ಲ. ನಿಗದಿತ 20 ಓವರ್ ಗಳಲ್ಲಿ 148ರನ್ ಕಲೆ ಹಾಕುವ ವೇಳೆಗೆ ಥ್ರಿಲ್ಲರ್ ಕೋಬ್ರಾಸ್ ಸುಸ್ತಾಗಿದ್ದರು. ದುನಿಯಾ ವಿಜಯ್ 49ರನ್ ಗಳ ಉತ್ತಮ ಆಟ ಕೋಬ್ರಾಸನ್ನು ರಕ್ಷಿಸುವಲ್ಲಿ ವಿಫಲವಾಯಿತು.77 ರನ್ ಗಳ ದಯನೀಯ ಸೋಲನ್ನು ಥ್ರಿಲ್ಲರ್ ಕೋಬ್ರಾಸ್ ಅನುಭವಿಸುವಂತಾಯಿತು.

  ಮೊದಲ ಪಂದ್ಯ ನಿಧಾನಗತಿಯಲ್ಲಿ ನಡೆದ ಪರಿಣಾಮ ಎರಡನೆ ಪಂದ್ಯಕ್ಕೆ ಮುಳುವಾಯಿತು. ಎರಡನೆ ಪಂದ್ಯವನ್ನು 20 ಓವರ್ ಗಳ ಬದಲಾಗಿ 15 ಓವರ್ ಗಳಿಗೆ ನಿಗದಿಪಡಿಸಲಾಯಿತು. ಟಾಸ್ ಗೆದ್ದ ಲೆನ್ಸ್ ಕಿಂಗ್ಸ್ (ಛಾಯಾಗ್ರಾಹಕರ ತಂಡ) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 15 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 111 ರನ್ ಗಳ ಗುರಿಯನ್ನು ಮುಂದಿಟ್ಟಿತು.

  ಕಣಕ್ಕಿಳಿದ ಲೆಜಿಸ್ಲೇಟಿವ್ ಲಯನ್ಸ್(ಶಾಸಕರ) ತಂಡ 104 ರನ್ ಗಳನ್ನು ಕಲೆಹಾಕುವ ಹೊತ್ತಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು ಕೈಚೆಲ್ಲಿತು.ಛಾಯಾಗ್ರಾಹಕರ ತಂಡ ಭರ್ಜರಿ 7 ವಿಕೆಟ್ ಗಳ ಗೆಲುವನ್ನು ದಾಖಲಿಸಿತು. ಕರ್ನಾಟಕ ನೃತ್ಯ ಕಲಾವಿದರ ಸಂಘದ ಸಹಾಯರ್ಥ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಡಾ.ರಾಜ್ ಕಪ್ ದೃಶ್ಯ ವೈಭವ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X