»   » ಹ್ಯಾಟ್ರಿಕ್ ಹೀರೋ ಶಿವಣ್ಣನ ಹೊಸ ಚಿತ್ರ ಕ್ಷತ್ರಿಯ

ಹ್ಯಾಟ್ರಿಕ್ ಹೀರೋ ಶಿವಣ್ಣನ ಹೊಸ ಚಿತ್ರ ಕ್ಷತ್ರಿಯ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರ 'ಜೋಗಯ್ಯ' ಸೆಟ್ಟೇರುವುದು ತಡವಾಗಲಿದೆ. ಕಾರಣ ಶಿವಣ್ಣ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಚಿತ್ರದ ಹೆಸರು 'ಕ್ಷತ್ರಿಯ'. ಸದ್ಯಕ್ಕೆ ಶಿವಣ್ಣ ಅಭಿನಯಿಸುತ್ತಿರುವ 'ಮೈಲಾರಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಕನ್ನಡದ ದಾಖಲೆ ಚಿತ್ರ 'ಜೋಗಿ' ಚಿತ್ರದ ಮುಂದುವರಿದ ಭಾಗ 'ಜೋಗಯ್ಯ' ಎಂಬುದು ಗೊತ್ತೆಯಿದೆ. ರಕ್ಷಿತಾ ಪ್ರೇಮ್ ನಿರ್ಮಿಸುತ್ತಿರುವ 'ಜೋಗಯ್ಯ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಪ್ರೇಮ್. ಚಿತ್ರಕತೆ ಎಲ್ಲವನ್ನೂ ಸಿದ್ಧವಾಗಿಟ್ಟುಕೊಂಡಿರುವ ಪ್ರೇಮ್ಈ ಚಿತ್ರವನ್ನು ಆದಷ್ಟು ಬೇಗ ಮುಗಿಸಬೇಕು ಎಂಬುದು ಉದ್ದೇಶ.

ಏತನ್ಮಧ್ಯೆ ಶಿವಣ್ಣ ದಿಢೀರನೆ 'ಕ್ಷತ್ರಿಕ'ನನ್ನು ಒಪ್ಪಿಕೊಂಡು 'ಜೋಗಯ್ಯ'ನಿಗೆ ಬ್ರೇಕ್ ಹಾಕಿದ್ದಾರೆ. ಆದಷ್ಟು ಬೇಗ ಕ್ಷತ್ರಿಯನನ್ನು ಮುಗಿಸಿ ಜುಲೈ ವೇಳೆಗೆ 'ಜೋಗಯ್ಯ'ನನ್ನು ಕೈಗೆತ್ತಿಕೊಳ್ಳಲು ಶಿವಣ್ಣ ನಿರ್ಧರಿಸಿದ್ದಾರೆ. ಕ್ಷತ್ರಿಯ ಚಿತ್ರವನ್ನು ತೆಲುಗಿನ ನಿರ್ಮಾಪಕರಾದ ರವಿ ಮತ್ತು ಭಾಸ್ಕರ್ ನಿರ್ಮಿಸುತ್ತಿದ್ದಾರೆ. ವಿ ವಿ ಬದ್ರಿ ನಿರ್ದೇಶನ, ರಮಣ ಗೋಗುಲ ಅವರ ಸಂಗೀತ ಚಿತ್ರಕ್ಕಿರುತ್ತದೆ.

ಮೈಲಾರಿ ಚಿತ್ರೀಕರಣ ಮುಗಿಯುತ್ತಿದ್ದಂತೆ ಕ್ಷತ್ರಿಯ ಚಿತ್ರೀಕರಣ ಅರಂಭವಾಗಲಿದೆ. ಆ ಬಳಿಕವಷ್ಟೆ ಜೋಗಯ್ಯನ ಅಬ್ಬರ ಶುರುವಾಗಲಿದೆ ಎನ್ನುತ್ತವೆ ಮೂಲಗಳು. ಸುದೀರ್ಘ ಸಮಯ ಬಳಿಕ ಸಂಗೀತ ನಿರ್ದೇಶಕ ರಮಣ ಕನ್ನಡ ಚಿತ್ರಕ್ಕೆ ಮರಳುತ್ತಿದ್ದಾರೆ. ಅಂದಹಾಗೆ ಮೈಲಾರಿ ಚಿತ್ರಕ್ಕೆ ಸದಾ ಹಾಗೂ ಗಂಡ ಹೆಂಡತಿ ಸಂಜನಾ ಇಬ್ಬರು ನಾಯಕಿಯರು. ಇದು ಶಿವಣ್ಣನ 99ನೇ ಚಿತ್ರ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada