»   » ಕಾಂಬೋಡಿಯಾದಲ್ಲಿ 'ಅಪ್ಪು ಪಪ್ಪು' ಪ್ರಾರಂಭ

ಕಾಂಬೋಡಿಯಾದಲ್ಲಿ 'ಅಪ್ಪು ಪಪ್ಪು' ಪ್ರಾರಂಭ

Posted By:
Subscribe to Filmibeat Kannada

ಸೌಂದರ್ಯ ಜಗದೀಶ್ ಆರ್. ಅನಂತರಾಜು ಸಂಗಮದಲ್ಲಿ ಈಗಾಗಲೇ "ಮಸ್ತ್ ಮಜಾಮಾಡಿ" ಎಂಬ ಯಶಸ್ವೀ ಚಿತ್ರ ಹೊರ ಬಂದಿದ್ದು ನೆನಪಿರಬೇಕು. ಇದೇ ಜೋಡಿ ಈಗ "ಅಪ್ಪು-ಪಪ್ಪು" ಎಂಬ ಮತ್ತೊಂದು ಬಿಗ್ ಚಿತ್ರ ನಿರ್ಮಾಣಕ್ಕೆ ಕೈಹಾಕಿದೆ. ಹಾಲಿವುಡ್‌ನಲ್ಲಿ ಚಿಂಪಾಂಜಿಯ ಸಾಹಸದ ಚಿತ್ರಗಳು ಬಂದಿದ್ದರು ಭಾರತದಲ್ಲಿ ಯಾರೂ ಅಂಥಾ ಪ್ರಯತ್ನ ಮಾಡಿಲ್ಲ. ನಿರ್ಮಾಪಕ ಸೌಂದರ್ಯ ಜಗದೀಶ್ ಆ ಸಾಹಸ ಮಾಡುತ್ತಿದ್ದಾರೆ.

ಚಿತ್ರದ ಟೈಟಲ್ ಹೇಳುವ ಹಾಗೆ ಇದು ಒಬ್ಬ ಬಾಲಕ ಹಾಗೂ ಪ್ರಾಣಿಯೊಂದರ ಕಥೆ. ಜಗದೀಶರ ಪುತ್ರ ಲಿಟಲ್ ಸ್ಟಾರ್ ಸ್ನೇಹಿತನ ಜೊತೆ "ವಾರಂಗಟಾನ" ಹೆಸರಿನ ಚಿಂಪಾಂಜಿಯೂ ನಟಿಸುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಬೇಕಾಗಿತ್ತು. ಇಂಡೋನೇಷಿಯಾ, ಮಲೇಷಿಯಾ ಥೈಲ್ಯಾಂಡ್, ಬ್ಯಾಂಕಾಕ್ ಸೇರಿದಂತೆ ಮೊದಲಾದ ಕಡೆ ಈ ಚಿಂಪಾಂಜಿಯನ್ನು ಹುಡುಕುವಲ್ಲಿ ಸಮಯ ಕಳೆದು ಕೊನೆಗೆ ಈ "ವಾರಂಗಟನ್" ಸಿಕ್ಕ ಮೇಲೆ ಕಳೆದ 19 ರಂದು ಕಾಂಬೋಡಿಯಾದಲ್ಲಿ ಚಿತ್ರೀಕರಣ ಪ್ರಾರಂಭಿಸಲಾಯಿತು.

ಒಂದೇ ಹಂತದಲ್ಲಿ 65 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು 25 ದಿನ ಕಾಂಬೋಡಿಯಾದಲ್ಲಿ ನಂತರ ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರೀಕರಿಸಲಿದ್ದಾರೆ. ಈ ಚಿಂಪಾಂಜಿಗೆ 50 ದಿನಗಳ ಕಾಲ ತರಬೇತಿ ನೀಡಲಾಗಿದೆ. ಅಲ್ಲದೆ ಈ ಪ್ರಾಣಿಯನ್ನು ಬಳಸಿಕೊಳ್ಳಲು ಅನುಮತಿ ಸಿಗುವುದೂ ಸ್ವಲ್ಪ ತಡವಾಯ್ತು. ಪುಟ್ಟ ಬಾಲಕ ಹಾಗೂ ಚಿಂಪಾಂಜಿಯ ನಡುವಿನ ಮುಗ್ಧ ಪ್ರೀತಿ ಹಾಗೂ ಚಿಂಪಾಂಜಿಯ ಸಾಹಸದ ಕಥೆ ಹೊಂದಿರುವ ಈ ಚಿತ್ರ ಕನ್ನಡಕ್ಕೊಂದು ದಾಖಲೆಯಾಗಲಿದೆ. ಸೌಂದರ್ಯ ಜಗದೀಶ್ ಫಿಲಂಸ್ ಲಾಂಛನದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ನಿರ್ಮಾಪಕ ಜಗದೀಶರ ಸಾಹಸಕ್ಕೆ ಸೈ ಎನ್ನಲೇಬೇಕು.

ವಿಜಯಕಿರಣ್ ಕಾರ್ಯಕಾರಿ ನಿರ್ಮಾಪಕರಾಗಿದ್ದು ಜಗದೀಶ್ ಫಿಲಂಸ್‌ನ ಕಥೆ, ಕೃಷ್ಣರ ಛಾಯಾಗ್ರಹಣ, ಹಂಸಲೇಖರ ಸಾಹಿತ್ಯ, ಸಂಗೀತ, ರಾಂನಾರಾಯಣರ ಸಂಭಾಷಣೆ, ಪಳನಿರಾಜ್‌ರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವವರು ಆರ್.ಅನಂತರಾಜು, ಅಬ್ಬಾಸ್, ರೇಖಾ ರಂಗಾಯಣ ರಘು, ಕೋಮಲ್ ಮೊದಲಾದವರ ತಾರಾಣವಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada