»   »  ದರ್ಶನ್ ದ್ವಿಪಾತ್ರಾಭಿನಯದ ಚಿತ್ರ 'ಬಾಸ್'

ದರ್ಶನ್ ದ್ವಿಪಾತ್ರಾಭಿನಯದ ಚಿತ್ರ 'ಬಾಸ್'

Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ದ್ವಿಪಾತ್ರಾಭಿನಯದ ಚಿತ್ರ 'ಬಾಸ್'. ರಮೇಶ್ ಯಾದವ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಆರ್ ರಘುರಾಂ ನಿರ್ದೇಶಿಸುತ್ತಿದ್ದಾರೆ. ರಮೇಶ್ ಯಾದವ್ ಪ್ರೊಡಕ್ಷನ್ಸ್ ಕನ್ನಡದಲ್ಲಿ ನಿರ್ಮಿಸುತ್ತಿರುವ 17 ಚಿತ್ರವಿದು. ಚಿತ್ರಕ್ಕೆ ಕತೆ, ಸಂಭಾಷಣೆಯನ್ನು ಸ್ವತಃ ರಘುರಾಂ ಅವರೇ ಬರೆದಿದ್ದಾರೆ.

ಬಾಸ್ ಚಿತ್ರವನ್ನು ಬೆಂಗಳೂರು, ಮೈಸೂರು ಸೇರಿದಂತೆ ಆಸ್ಟ್ರಿಯಾ ಮತ್ತು ಜರ್ಮನಿಯಲ್ಲೂ ಚಿತ್ರೀಕರಿಸಲಾಗಿದೆ. ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು ಗ್ರಾಫಿಕ್ಸ್ ಅಳವಡಿಕೆ ಕಾರ್ಯ ಮಾತ್ರ ಬಾಕಿ ಇದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಕೆ ಕೃಷ್ಣಕುಮಾರ್ ಛಾಯಾಗ್ರಹಣ ಮತ್ತು ವಿ ಹರಿಕೃಷ್ಣ ಸಂಗೀತ 'ಬಾಸ್' ಚಿತ್ರಕ್ಕಿದೆ.

ದರ್ಶನ್ ಗೆ ಜತೆಯಾಗಿ ರೇಖಾ ಮತ್ತು ನವ್ಯಾ ನಾಯರ್ ಮುಖ್ಯ ತಾರಾಗಣದಲ್ಲಿದ್ದಾರೆ. ಬಾಸ್ ಚಿತ್ರದಲ್ಲಿ ತಮಿಳು ನಟ ಶಿವಾಜಿ ಪ್ರಭು ಅಭಿನಯಿಸುವ ಮೂಲಕ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ರಂಗಾಯಣ ರಘು, ಉಮಾಶ್ರೀ, ಸುಮಿತ್ರಾ ಮತ್ತು ಬುಲೆಟ್ ಪ್ರಕಾಶ್ ತಾರಾಗಣದಲ್ಲಿನ ಇತರರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada