»   » ಲೇಡಿ ಬ್ರೂಸ್ಲಿಯೊಂದಿಗೆ ಥ್ರಿಲ್ಲರ್ 'ಜಯಹೇ'

ಲೇಡಿ ಬ್ರೂಸ್ಲಿಯೊಂದಿಗೆ ಥ್ರಿಲ್ಲರ್ 'ಜಯಹೇ'

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವೆಂದರೆ ಆ ಚಿತ್ರ ಒಂದು ರೀತಿಯ ಥ್ರಿಲ್‌ನಿಂದ ಕೂಡಿರುತ್ತದೆ ಎಂದೇ ಹೇಳಬೇಕು. ಇವರ ಸಾಹನ ನಿರ್ದೇಶನದಲ್ಲಿ ಮೂಡಿಬಂದ ಎಷ್ಟೋ ಚಿತ್ರಗಳಿಗೆ ಸಾಹಸವೇ ಹೈಲೈಟ್ ಆಗಿ ಆ ಚಿತ್ರಗಳೂ ಯಶಸ್ವಿಯಾಗಿವೆ ಎಂದರೆ ತಪ್ಪಲ್ಲ. ಆನಂತರ ಥ್ರಿಲ್ಲರ್ ಮಂಜು ಹಲವಾರು ಚಿತ್ರಗಳಲ್ಲಿನಾಯಕನಟನಾಗುವುದರ ಜೊತೆಗೆ ಚಿತ್ರಗಳನ್ನು ನಿರ್ದೇಶಿಸಿದರು.

ಮಂಜು ಈಗ ಸಿಗ್ನಸ್ ಎಂಟರ್‌ಟೈನ್‌ಮೆಂಟ್‌ಗಾಗಿ 'ಜಯಹೇ' ಎಂಬ ಒಂದು ಸಾಹಸ, ಸೆಂಟಿಮೆಂಟ್‌ನಿಂದ ಕೂಡಿದ ಚಿತ್ರವನ್ನು ನಿರ್ದೇಶಿಸಿ ಯಾವುದೇ ಸದ್ದುಗದ್ದಲವಿಲ್ಲದೆ ಸಂಪೂರ್ಣಗೊಳಿಸಿದ್ದಾರೆ.ನಲ್ವತ್ತೈದು ದಿವಸಗಳ ಕಾಲ ಬೆಂಗಳೂರು, ಮಂಗಳೂರು, ದುಬಾರೆ ಫಾರೆಸ್ಟ್, ಬ್ಯಾಂಕಾಕ್, ಹಾಂಕಾಂಗ್‌ಗಳಲ್ಲಿ ಚಿತ್ರೀಕರಣ ಮುಗಿಸಿ ಚಿತ್ರಕ್ಕೆ ಈಗ ಚಾಮುಂಡೇಶ್ವರಿ ಸ್ಟುಡಿಯೋವಿನಲ್ಲಿ ಮಾತಿನ ಮರುಲೇಪನ ಕಾರ್ಯ ನಡೆಸಿದ್ದಾರೆ.

ಚಿತ್ರಕ್ಕೆ ಕಮಲ್ ಸಾರಥಿ ಸಂಭಾಷಣೆ, ಜನಾರ್ಧನ್ ಬಾಬು ಛಾಯಾಗ್ರಹಣ, ಎಂ.ಎನ್. ಕೃಪಾಕರ್ ಸಂಗೀತ, ತ್ರಿಭುವನ್, ಹರಿಕೃಷ್ಣ ನೃತ್ಯ, ಗೋವರ್ಧನ್ ಸಂಕಲನ, ಬಾಬುಖಾನ್ ಕಲೆ, ಶ್ರೀನಿವಾಸ್‌ಕುಮಾರ್ ನಿರ್ದೇಶನ ಸಹಕಾರ, ಅನಿಲ್‌ಕುಮಾರ್ ನಿರ್ಮಾಣ ಮೇಲ್ವಿಚಾರಣೆಯಿದ್ದು, ಚಿತ್ರದ ಕಥೆ, ಚಿತ್ರಕಥೆ, ಸಾಹಸ, ಸಾಹಿತ್ಯ ಮತ್ತು ನಿರ್ದೇಶನ ಥ್ರಿಲ್ಲರ್ ಮಂಜು.

ಕರಾಟೆಯಲ್ಲಿ ಪರಿಣಿತ ಲೇಡಿ ಬ್ರೂಸ್ಲೀ ಆಯೇಷಾ ಈ ಚಿತ್ರದ ಮೂಲಕ ನಾಯಕಿನಟಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ಇವರೊಂದಿಗೆ ಜೈ ಆಕಾಶ್, ಗೌರೀ ಪಂಡಿತ್, ಥ್ರಿಲ್ಲರ್ ಮಂಜು ಅವಿನಾಶ್, ರಮೇಶ್‌ಭಟ್, ಸೂರ್ಯನಾರಾಯಣ, ರವಿಕುಮಾರ್, ರೇಖಾ ಉಳಿದ ತಾರಾಗಬಳಗದಲ್ಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada