»   » ಸ್ಯಾಂಡಲ್ ವುಡ್ ಗೆ ಶೀಘ್ರದಲ್ಲಿ ಬರಲಿದೆ ಟೈಟಾನಿಕ್

ಸ್ಯಾಂಡಲ್ ವುಡ್ ಗೆ ಶೀಘ್ರದಲ್ಲಿ ಬರಲಿದೆ ಟೈಟಾನಿಕ್

Posted By:
Subscribe to Filmibeat Kannada
Rajanish Pawan
ಈ ಮೊದಲೇ ಒಮ್ಮೆ ಸುದ್ದಿಯಾಗಿದ್ದ ಸುದ್ದಿ ಇದು. ಟೈಟಾನಿಕ್ ಎಂಬ ಹೆಸರಿನ ಚಿತ್ರವೊಂದು ಕನ್ನಡದಲ್ಲಿ ಬರುತ್ತಿದೆ. ಈ ಮೊದಲು ಅದು ಯಾವಾಗ ಎಂಬುದು ಸ್ಪಷ್ಟವಾಗಿರಲಿಲ್ಲ. ಆದರೆ ಈಗ ಸ್ಪಷ್ಟವಾಗಿದೆ. ಚಿತ್ರ ಶುರುವಾಗುವುದಕ್ಕೆ ಮೊದಲೊಂದು ಟೆಸ್ಟ್ ರೆಡಿಯಾಗಿದೆ. ಕಾರಣ ಇದು ಹೆಚ್ಚಾಗಿ ಹೊಸಬರನ್ನು ನಂಬಿಕೊಂಡಿರುವ ಚಿತ್ರ. ನಿರ್ದೇಶಕರು ರಜನೀಶ್ ಪವನ್.

ಚಿತ್ರದ ಶೂಟಿಂಗ್ ಪ್ರಾರಂಭಕ್ಕೆ ಮುನ್ನ, ನಾಯಕ ಸೇರಿದಂತೆ ಹೊಸಬರಿಗೆಲ್ಲರಿಗೂ ವರ್ಕ್ ಶಾಪ್ ನಡೆಯಲಿದೆ. ಇದನ್ನು ಕೇವಲ ವರ್ಕ್ ಶಾಪ್ ಅನ್ನುವುದಕ್ಕಿಂತ ಹೊಸಬರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಲ್ಲೊಂದು ಆತ್ಮವಿಶ್ವಾಸ ಮೂಡಿಸುವುದು ಈ ಟೆಸ್ಟ್ ರೈಡ್ ಉದ್ದೇಶ. ಟೆಲಿಫಿಲಂ ರೀತಿ ಚಿತ್ರೀಕರಿಸಿ, ಅದನ್ನು ನೋಡಿ ನಂತರ ಸಿನಿಮಾ ಚಿತ್ರೀಕರಣ ಮಾಡುವುದು ತಂಡದ ಹೊಸ ಭಿನ್ನ ಹಾಗೂ ಉದ್ದೇಶ.

ಶೇ. 80 ರಷ್ಟು ಹೊಸಬರೇ ತುಂಬಿರುವ ಈ ಚಿತ್ರವನ್ನು 'ಕಿರಣ ಕ್ರಿಯೇಷನ್ಸ್' ಬ್ಯಾನರ್ ಅಡಿ ಸಿ. ಶಿವಕುಮಾರ್ ಮೊದಲ ಬಾರಿಗೆ ನಿರ್ಮಿಸುತ್ತಿದ್ದಾರೆ. 'ದಿಸ್ ಈಸ್ ಟ್ರೂ ಅಫೆಕ್ಷನ್... ನಾಟ್ ಇನ್ಸ್ ಟೆಂಟ್ ಕ್ರಷ್' ಎಂಬ ಅಡಿಬರಹ ಹೊತ್ತ ಟೈಟಾನಿಕ್ ಶೀರ್ಷಿಕೆಯಂತೂ ಗಮನ ಸೆಳೆಯುವಂತಿದೆ. ಕನ್ನಡದಲ್ಲಿ ಮೊದಲ ಚಿತ್ರ ನಿರ್ದೇಶಿಸುತ್ತಿರುವ 'ರಜನೀಶ್ ಪವನ್' ಗೆ ಈ ಹಿಂದೆ 'ಪರಂಬೂಕು' ಹಾಗೂ ನೀನು ಚೂಡಕ ನೀನುದಲೇನು' ಎಂಬ ತೆಲುಗು ಚಿತ್ರ ನಿರ್ದೇಶಿಸಿರುವ ಅನುಭವ ಇದೆ. (ಒನ್ ಇಂಡಿಯಾ ಕನ್ನಡ)

English summary
The Telugu films director Rajanish Pawan of Telugu films Poramboku, Ninnu Choodaka Nenundalenui' is making debut in Kannada. Movie name is Titanic. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada