For Quick Alerts
  ALLOW NOTIFICATIONS  
  For Daily Alerts

  ದಂಡುಪಾಳ್ಯ ಸಿನಿಮಾ ಆಯ್ತು; ಹೊಸ ವರಸೆ ಶುರು

  |

  ಪೂಜಾ ಗಾಂಧಿ ದಂಡುಪಾಳ್ಯಕ್ಕಾಗಿ ಬೆನ್ನು ತೋರಿಸಿದ ಮೇಲೆ ಎಲ್ಲಾಕಡೆ ದಂಡುಪಾಳ್ಯದ್ದೇ ಸುದ್ದಿ. ಅದೊಂದು ನೈಜ ಘಟನೆ. ಆಗ ಸುದ್ದಿಯಾಗಿದ್ದಕ್ಕಿಂತ ಹೆಚ್ಚಾಗಿ ಪೂಜಾ ಗಾಂಧಿಯ ಅರೆಬೆತ್ತಲೆ ದರ್ಶನದಿಂದ ಸುದ್ದಿಯಾಗುತ್ತಿರುವುದೇ ಹೆಚ್ಚು ಅನ್ನುವಂತಾಗಿದೆ. ಇದೀಗ ಇನ್ನೂ ಹೆಚ್ಚು ಪ್ರಚಾರವಾಗುವ ನಿಟ್ಟಿನಲ್ಲಿ ಅದು ಪುಸ್ತಕ ರೂಪದಲ್ಲಿ ಬರಲಿದೆ. ಲೇಖಕರು ಹಾಗೂ ಉಳಿದ ಮಾಹಿತಿ ಸದ್ಯಕ್ಕೆ ಗೌಪ್ಯ.

  ಮೇಕಿಂಗ್ ಆಫ್ ದಂಡುಪಾಳ್ಯ ಹೆಸರಿನ ಈ ಪುಸ್ತಕದಲ್ಲಿ ಇದೀಗ ಸಿದ್ಧವಾಗುತ್ತಿರುವ ಸಿನಿಮಾ ಮೇಕಿಂಗ್ ಬಗ್ಗೆ, ನರಹಂತಕರ ಹಾಗೂ ದಂಡುಪಾಳ್ಯ ಊರಿನ ಸದ್ಯದ ಸ್ಥಿತಿಗತಿ, ದಂಡುಪಾಳ್ಯ ಗ್ಯಾಂಗಿನ ನೈಜಘಟನೆಗೂ ಸಿನಿಮಾಕ್ಕೂ ಇರುವ ಸಾಮ್ಯತೆ, ಗ್ಯಾಂಗ್ ಸೆರೆಹಿಡಿದು ತನಿಖೆ ಮಾಡಿದ ಮಾಜಿ ಪೊಲೀಸ್ ಅಧಿಕಾರಿ ಚಲಪತಿ ಚಿತ್ರದ ಬಗ್ಗೆ ಹೇಳುವುದೇನು? ಮುಂತಾದ ಸಂಗತಿಗಳಿವೆ.

  ಇಷ್ಟೇ ಅಲ್ಲದೇ, ದಂಡುಪಾಳ್ಯ ಚಿತ್ರದ ನಿರ್ದೆಶಕ ಶ್ರೀನಿವಾಸರಾಜು ಚಿತ್ರದ ಬಗ್ಗೆ ಏನು ಹೇಳುತ್ತಾರೆ? ಪೂಜಾ ಗಾಂಧಿ ಬೆನ್ನು ತೋರಿಸಿದ್ದಾದರೂ ಯಾಕೆ? ಈ ಎಲ್ಲಾ ವಿಷಯಗಳ ಕುರಿತು ಸಮಗ್ರ ಮಾಹಿತಿ ಹಾಗೂ ಸಂಬಂಧಪಟ್ಟ ಫೋಟೋಗಳು ಈ ಪುಸ್ತಕದಲ್ಲಿರುತ್ತವೆ. ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಈ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. (ಒನ್ ಇಂಡಿಯಾ ಕನ್ನಡ)

  English summary
  Kannada Movie Dandupalya is now in News. There is also another news that a Book is going to release on this in the month of Feb, 2012 about this Dandupalya incident. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X