»   » ಗೋಕುಲ, ಜೀವಾ ಇಂದು ತೆರೆಗೆ

ಗೋಕುಲ, ಜೀವಾ ಇಂದು ತೆರೆಗೆ

Posted By:
Subscribe to Filmibeat Kannada

ಖುಷಿ, ರಿಷಿ, ಶ್ರೀ, ಮಿಲನ ಮತ್ತು ವಂಶಿ ಚಿತ್ರ ನಿರ್ದೇಶಿಸಿದ್ದ ಪ್ರಕಾಶ್ ಅವರ ಹೊಸ ಚಿತ್ರ 'ಗೋಕುಲ' ಇಂದು ಬಿಡುಗಡೆಯಾಗಿದೆ. ಇದು ಪ್ರಕಾಶ್ ಅವರ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ. ಸ್ವತಃ ಪ್ರಕಾಶ್ ಅವರೇ ಚಿತ್ರದ ಕಥೆ ಮತ್ತು ಚಿತ್ರಕಥೆ ಹಣೆದಿದ್ದಾರೆ. ಮನೋಮೂರ್ತಿ ಸಂಗೀತಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತದೆ ಗಾಂಧೀನಗರ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ವಿಜಯ್ ರಾಘವೇಂದ್ರ, ಪೂಜಾ ಗಾಂಧಿ, ಯಶ್, ಪವನ್, ರಘುರಾಜ್, ನಕ್ಷತ್ರ, ಶ್ರೀನಿವಾಸಮೂರ್ತಿ, ಸುಮಿತ್ರಾ ಮುಂತಾದವರಿದ್ದಾರೆ.

ನವೀಕೃತಗೊಂಡಿರುವ ಅಪರ್ಣ ಚಿತ್ರಮಂದಿರದಲ್ಲಿ ಗೋಕುಲ ಪ್ರದರ್ಶಿತವಾಗುತ್ತಿದೆ. ಅಪರ್ಣ ಚಿತ್ರಮಂದಿರದ ಹೊಸ ಹೆಸರು ಅನುಪಮ. ಪ್ರಸನ್ನ, ಉಮ, ನವರಂಗ್ ಮುಂತಾದ ಚಿತ್ರಮಂದಿರಗಳಲ್ಲಿ ಶೋ ಆರಂಭವಾಗಿದೆ.

ಪ್ರಜ್ವಲ್ ದೇವರಾಜ್ ಅಭಿನಯದ 'ಜೀವಾ' ಚಿತ್ರ ಕೂಡ ಇಂದು ತೆರೆಕಂಡಿದೆ. ಗಾಂಧೀನಗರಕ್ಕೆ ಹೊಸಬರಾದ ಪ್ರಭು ಶ್ರೀನಿವಾಸ್ ಚಿತ್ರದ ನಿರ್ದೇಶಕರು. ಪಿ2 ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಪರಮೇಶ್ ಮತ್ತು ಪ್ರೇಂ ನಿರ್ಮಾಪಕರು. ಜಾಲಿ ಡೇಸ್ ಚಿತ್ರಕ್ಕೆ ನಾಯಕಿಯಾಗಿದ್ದ ರುಥ್ವಾ ಈ ಚಿತ್ರದ ನಾಯಕಿ. ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಸಭಾ ಕುಮಾರ್ ಕ್ಯಾಮೆರಾ ಹಿಡಿದ್ದಾರೆ. ಪ್ರದರ್ಶನ : ಸಂತೋಷ್, ವೀರೇಶ್, ಪಿವಿಆರ್, ಗೋವರ್ಧನ್ ಮುಂತಾದೆಡೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada