»   »  ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗಣೇಶ್ ಚಿತ್ರ

ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗಣೇಶ್ ಚಿತ್ರ

Posted By:
Subscribe to Filmibeat Kannada
Pritam Gubbi film with Ganesh
ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಯೋಗರಾಜ ಭಟ್ ಹಾಗೂ ಕಥೆಗಾರ ಪ್ರೀತಂ ಗುಬ್ಬಿ ಗರಡಿಯಲ್ಲಿ ತೆರೆಗೆ ಬಂದ ಮುಂಗಾರುಮಳೆ ಚಿತ್ರ ಅನೇಕ ದಾಖಲೆಗಳನ್ನು ನಿರ್ಮಿಸಿತ್ತು. ಗಣೇಶ್, ಯೋಗರಾಜ ಅವರ ಹಣೆಬರಹವನ್ನೇ ಬದಲಾಯಿಸಿದ ಈ ಚಿತ್ರದ ಕಥೆಯನ್ನು ಹೆಣದಿರುವುದು ಕಥೆಗಾರ ಪ್ರೀತಂ ಗುಬ್ಬಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ನಂತರ ದಿನಗಳಲ್ಲಿ ಪ್ರೀತಂ ಗುಬ್ಬಿ ಅವರು ಕಥೆಗಾರನ ಜತೆಗೆ ನಿರ್ದೇಶಕನ ಪಟ್ಟವನ್ನು ಅಲಂಕರಿಸಿದರು. ಇವರ ನಿರ್ದೇಶನದ 'ಹಾಗೆ ಸುಮ್ಮನೆ' ಚಿತ್ರ ತೆರೆಯಿಂದ ಹಾಗೆ ಸುಮ್ಮನೇ ಹೋಗದೆ ಸ್ವಲ್ಪ ಗದ್ದಲವನ್ನೂ ಮಾಡಿತು. ಆದರೆ, ಆ ಗದ್ದಲ 'ಮುಂಗಾರುಮಳೆ'ಯಷ್ಟು ಜೋರಾಗಿರಲಿಲ್ಲ ಎಂಬುದು ವಿಶೇಷ.

ಇದೀಗ ಗಾಂಧಿ ನಗರದಿಂದ ಹೊಸ ಸುದ್ದಿಯೊಂದು ಹೊರಬಂದಿದ್ದು, ಪ್ರೀತಂ ಗುಬ್ಬಿ ನಿರ್ದೇಶನ ನೂತನ ಚಿತ್ರದಲ್ಲಿ ಗಣೇಶ್ ನಟಿಸಲಿದ್ದಾರೆ. ಗಣೇಶ್ ಅವರನ್ನು ಗಮನದಲ್ಲಿರಿಸಿಕೊಂಡು ಕಥೆ ಹೆಣಿಯಲಾಗಿದೆ. ಇದೊಂದು ವಿನೂತನ ಶೈಲಿಯ ಪಕ್ಕಾ ಪ್ರೇಮಕಥೆ. ಈ ಚಿತ್ರಕ್ಕೆ ಗಣೇಶ್ ಅವರೇ ನಾಯಕ ನಟ. ಗಣೇಶ್ ಆ ಸ್ಥಾನಕ್ಕೆ ಸೂಕ್ತ ಎಂಬುದು ನನ್ನ ಭಾವನೆ. ಚಿತ್ರಕತೆಗಾಗಿ ಸುದೀರ್ಘ ಸಮಯವನ್ನು ವೆಚ್ಚಿಸಿದ್ದಾರೆ ಪ್ರೀತಂ ಗುಬ್ಬಿ.

ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಾದರೂ ಜೂನ್, ಜುಲೈ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮುಂಗಾರುಮಳೆ ಚಿತ್ರದಲ್ಲಿ ಅದ್ಭುತ ಕ್ಯಾಮರಾ ಕೈಚಳಕ ತೋರಿಸಿದ್ದ ವಿ.ಕೃಷ್ಣ ಈ ಹೊಸ ಚಿತ್ರದ ಛಾಯಾಗ್ರಾಹಕರು. ಹರ್ಷಅವರ ನೃತ್ಯ ಸಂಯೋಜನೆ, ದೀಪು ಎಸ್ ಕುಮಾರ್ ಸಂಕಲನ, ಜಯಂತ ಕಾಯ್ಕಿಣಿ ಅವರ ಸಾಹಿತ್ಯ, ಹರಿಕೃಷ್ಣ ಅವರ ಸಂಗೀತ ಸಹ ಚಿತ್ರಕ್ಕೆ ಜತೆಯಾಗಲಿದೆ. ಈ ಚಿತ್ರದಲ್ಲಿ ಇಬ್ಬರು ನಾಯಕಿರಿರುತ್ತಾರೆ. ಆ ಎರಡು ಪಾತ್ರಗಳು ಚಿತ್ರದ ಜೀವಾಳ ಎನ್ನುತ್ತಾರೆ ಪ್ರೀತಂ. ಪ್ರಸ್ತುತ ನಟಿಯರನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ಪ್ರೀತಂ ಮಗ್ನರಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮಾಯವಾಗಿದೆ ಪ್ರೀತಂ ಗುಬ್ಬಿ ಮ್ಯಾಜಿಕ್ ಸ್ಪರ್ಶ
ಮುಂಗಾರುಮಳೆ ಪ್ರೀತಂ ಗುಬ್ಬಿ ಜತೆ ಹಾಗೇ ಸುಮ್ಮನೆ
ಜೂನಿಯರ್ ತ್ರಿಶಾ ಕುರಿತು ಹಾಗೆ ಸುಮ್ಮನೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada