»   » ವೈಎಸ್‍ಆರ್ ನಿಗೂಢ ಸಾವಿನ ಮೇಲೆ ವರ್ಮಾ ಸಿನಿಮಾ

ವೈಎಸ್‍ಆರ್ ನಿಗೂಢ ಸಾವಿನ ಮೇಲೆ ವರ್ಮಾ ಸಿನಿಮಾ

Posted By:
Subscribe to Filmibeat Kannada

ಆಂಧ್ರ ಪ್ರದೇಶನದ ಮಾಜಿ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ದುರಂತದಲ್ಲಿ ಸಾವಪ್ಪಿದ್ದು ಗೊತ್ತೇ ಇದೆ. ಆದರೆ ಇದು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಅವರ ಸಾವು ಉದ್ದೇಶಪೂರ್ವಕವಾಗಿದ್ದರೆ, ಅದರ ಹಿಂದಿನ ಕೈಗಳಾವುವು??

ಈ ಪ್ರಶ್ನೆಗೆ ಉತ್ತರ ನೀಡಲು ಹೊರಟಿದ್ದಾರೆ ಬಾಲಿವುಡ್‌ನ 'ಭಯಾನಕ' ನಿರ್ದೇಶಕ ರಾಮ್ ಗೋಪಾಲ್ ವರ್ಮ. ತೆಲುಗಿನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದ ಶೀರ್ಷಿಕೆ ಕುತೂಹಲ ಹುಟ್ಟಿಸುವಂತಿದೆ. ಅದೇನೆಂದರೆ 'ರೆಡ್ಡಿಗಾರು ಪೋಯಾರು' (ರೆಡ್ಡಿಯವರು ಹೋದರು). ಅಂದರೆ ಯಾವ ರೆಡ್ಡಿ ಎಂಬ ಅನುಮಾನ ಮೂಡುತ್ತದೆ.

ವೈಎಸ್ ರಾಜಶೇಖರ ರೆಡ್ಡಿಯೇ ಅಥವಾ ಜನಾರ್ಧನ ರೆಡ್ಡಿ ಜೈಲಿಗೆ ಹೋಗಿದ್ದೇ. ಸದ್ಯಕ್ಕೆ ಈ ಚಿತ್ರದ ಬಗ್ಗೆ ಯಾವುದೇ ಸುಳಿವು ಲಭ್ಯವಿಲ್ಲ. ಕೇವಲ ಚಿತ್ರದ ಶೀರ್ಷಿಕೆಯಷ್ಟೇ ಪಕ್ಕಾ ಆಗಿದೆ. ಸದ್ಯಕ್ಕೆ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಹೀಗಿದೆ, "In War, you can only be killed once, but in politics, many times-Winston Churchill. (ಏಜೆನ್ಸೀಸ್)

English summary
Ram Gopal Varma's new film titled as Reddygaru poyaru. The story is based on the incidents happened in state after the death of Ex CM Y.S. Rajasekhara Reddy.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X