»   » 'ಎಕೆ 56'ಕ್ಕೆ 3.5 ಕೋಟಿ ವೆಚ್ಚದಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್

'ಎಕೆ 56'ಕ್ಕೆ 3.5 ಕೋಟಿ ವೆಚ್ಚದಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್

Subscribe to Filmibeat Kannada

ಎನ್ ಓಂ ಪ್ರಕಾಶ್ ರಾವ್ ನಿರ್ದೇಶನದ 25ನೇ ಚಿತ್ರ 'ಎಕೆ 56'. ಈ ಚಿತ್ರಕ್ಕೆ ರೋಮಾಂಚಕಾರಿ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ತಮಿಳುನಾಡಿನ ತೇನಿ ರೈಲು ನಿಲ್ದಾಣದಲ್ಲಿ ರೈಲು ಬೋಗಿಯೊಂದಕ್ಕೆ ಬೆಂಕಿಬೀಳುವ ಸಾಹಸ ಸನ್ನಿವೇಶದಚಿತ್ರೀಕರಣ ನಡೆಯಲಿದೆ.

ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶ ಇದಾಗಿದ್ದು 3.5 ಕೋಟಿ ರು.ಗಳನ್ನು ವೆಚ್ಚ ಮಾಡಲಾಗುತ್ತದೆ. 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದ್ದು ಇದಕ್ಕಾಗಿ 20 ರೈಲ್ವೆ ಬೋಗಿಗಳನ್ನು ಪಡೆಯಲಾಗಿತ್ತು. ನಾಲ್ಕು ದಿನಗಳ ಕಾಲ ಮೂರು ಹೆಲಿಕಾಪ್ಟರ್ ಗಳನ್ನು ಬಳಸಿಕೊಳ್ಳಲಾಗಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣವಮ್ಮಿ ಲಂಡನ್ ನಿಂದ ತರಿಸಿದ್ದ ವಿಶೇಷ ಕ್ಯಾಮೆರಾಗಳಲ್ಲಿ ಚಿತ್ರೀಕರಿಸಲಾಗಿತ್ತು ಎಂದು ಓಂ ಪ್ರಕಾಶ್ ರಾವ್ ತಿಳಿಸಿದ್ದಾರೆ.

ಎಕೆ 56 ಚಿತ್ರದ ಮುಖ್ಯ ಪಾತ್ರಧಾರಿಗಳು ಸಿದ್ಧಾಂತ್ ಮತ್ತು ಶಿರಿನ್. ಎಸ್ ಮನೋಹರ್ ಛಾಯಾಗ್ರಹಣ ಚಿತ್ರಕ್ಕಿದ್ದು ತಾರಾಗಣದಲ್ಲಿ ಶರತ್ ಬಾಬು, ಸುಮಲತಾ, ಅವಿನಾಶ್, ಬುಲೆಟ್ ಪ್ರಕಾಶ್, ಅತುಲ್ ಕುಲಕರ್ಣಿ, ಲೋಕನಾಥ್, ಕಿಶೋರಿ ಬಲ್ಲಾಳ್, ಸತ್ಯಜಿತ್, ಸಂಗೀತಾ, ಸುಚಿತ್ರಾ ಇದ್ದಾರೆ. ಸಿಲ್ವರ್ ಸ್ಕ್ರೀನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ ವೆಂಕಟೇಶ್ ಬಾಬು ಮತ್ತು ಎಂ ಗೋವಿಂದರಾಜು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada