For Quick Alerts
  ALLOW NOTIFICATIONS  
  For Daily Alerts

  ವಿಷ್ಣು, ಉಪ್ಪಿ, ರಮ್ಯಾಗೆ ಸುವರ್ಣ ಫಿಲ್ಮಂ ಪ್ರಶಸ್ತಿ 2011

  By Mahesh
  |

  ಸುವರ್ಣ ಫಿಲ್ಮಂ ಪ್ರಶಸ್ತಿ 2011 ಪ್ರಕಟಗೊಂಡಿದೆ. ಜೂನ್ 25ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದ್ದು, ಆಗಸ್ಟ್ ನಲ್ಲಿ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಅತ್ಯುತ್ತಮ ನಟ ವಿಷ್ಣುವರ್ಧನ್, ಅತ್ಯುತ್ತಮ ನಟಿ ರಮ್ಯಾ, ಅತ್ಯುತ್ತಮ ನಿರ್ದೇಶಕ ಉಪೇಂದ್ರ, ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಗೀತ ಸಾಹಿತ್ಯಕ್ಕೆ ಕಾಮತ್ ಗೆ ಪ್ರಶಸ್ತಿ ಲಭಿಸಿದೆ.

  2010ನೇ ಸಾಲಿನಲ್ಲಿ ಒಟ್ಟು 150 ಚಿತ್ರಗಳು ನಾಮ ನಿರ್ದೇಶನಗೊಂಡಿದ್ದವು. ಐದು ವಿಶೇಷ ಪ್ರಶಸ್ತಿಗಳು ಸೇರಿದಂತೆ ಒಟ್ಟು 29 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇವುಗಳಲ್ಲಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡುವ ಹೊಣೆಯನ್ನು ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ತಾರಾ, ಪತ್ರಕರ್ತ, ಲೇಖಕ ಜೋಗಿ ಹಾಗೂ ಮಿಲನ ಪ್ರಕಾಶ್ ಹೊತ್ತಿದ್ದರು.

  ಮತ ಸಂಗ್ರಹಕ್ಕೆ ಸುವರ್ಣ ವಾಹಿನಿ ವಿಶೇಷ ಫಿಲಂ ಫ್ಯಾನ್ಸ್ ಎಕ್ಸ್‌ಪ್ರೆಸ್ ವ್ಯಾನ್ ಮೂಲಕ ರಾಜ್ಯದ ನಾನಾ ಕಡೆ ಸಂಚರಿಸಿ ಮತಗಳನ್ನು ಸಂಗ್ರಹಿಸಲಾಗಿದೆ. ಮೈಸೂರು, ಹಾಸನ, ಮಂಗಳೂರು, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ, ಧಾರವಾಡ ಹಾಗೂ ಚಿತ್ರದುರ್ಗದಲ್ಲಿ ಈ ವಿಶೇಷ ವಾಹನ ಸಂಚರಿಸಿ ಮತಗಳನ್ನು ಸಂಗ್ರಹಿಸಲಾಯಿತು. ಇದಲ್ಲದೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ನಟಿಯರನ್ನು ಎಸ್ ಎಂಎಸ್ ಕಳಿಸುವ ಮೂಲಕ ಆಯ್ಕೆ ಮಾಡಿದ್ದಾರೆ.

  English summary
  The much-awaited 3rd Suvarna Film Awards 2011 presented on June 25, 2011. A four-member jury headed by veteran producer-director-actor Dwarakish, national award-winning actress Tara, writer Jogi and director Milana Prakash declared Ramya as Best Actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X