For Quick Alerts
  ALLOW NOTIFICATIONS  
  For Daily Alerts

  ಮೈಸೂರು ಮೂಲದ ನಟಿ ಸಾಂಘವಿಗೆ ಕಂಕಣಭಾಗ್ಯ

  By Rajendra
  |

  ಮೈಸೂರು ಮೂಲದ ಕನ್ನಡದ ನಟಿ ಸಾಂಘವಿಗೆ ಕಂಕಣಭಾಗ್ಯ ಕೂಡಿಬಂದಿದೆ. ಯುಎಸ್ ಮೂಲದ ವೈದ್ಯರನ್ನು ಸಾಂಘವಿ ಕೈಹಿಡಿಯಲಿದ್ದಾರೆ. ಇವರಿಬ್ಬರ ಮದುವೆ ಮಾರ್ಚ್ 5ರಂದು ನೆರವೇರಲಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನ 95ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಾಂಘವಿ ಅಭಿನಯಿಸಿದ್ದಾರೆ.

  ಶೀಘ್ರದಲ್ಲೆ ನಿಶ್ಚಿತಾರ್ಥವೂ ನೆರವೇರಲಿದ್ದು ಮದುವೆ ಬಳಿಕ ತಮ್ಮ ಪತಿಯೊಂದಿಗೆ ಯುಎಸ್‌ನಲ್ಲಿ ಸೆಟ್ಲ್ ಆಗಲಿದ್ದಾರೆ ಎನ್ನುತ್ತವೆ ಮೂಲಗಳು. ಅಂದಹಾಗೆ ಸಾಂಘವಿ ಕನ್ನಡದ ನಿಧಿ, ಅನಾಥರು, ಇಂದ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹೆಚ್ಚಾಗಿ ಗುರುತಿಸಿಕೊಂಡಿದ್ದು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ.

  ಸಾಂಘವಿ ಅವರ ನಿಜವಾದ ನಾಮಧೇಯ ಕಾವ್ಯ ರಮೇಶ್. ಚಿತ್ರರಂಗಕ್ಕೆ ಅಡಿಯಿಟ್ಟ ಮೇಲೆ ಸಾಂಘವಿ ಎಂದಾದರು. ಓದಿದ್ದು ಮೈಸೂರಿನ ಪ್ರತಿಷ್ಠಿತ ಮರಿಮಲ್ಲಪ್ಪ ಶಾಲೆಯಲ್ಲಿ. ಕನ್ನಡ ಚಿತ್ರರಂಗದ 'ರಂಗನಾಯಕಿ' ಖ್ಯಾತಿಯ ಆರತಿ ಅವರ ಹತ್ತಿರದ ಸಂಬಂಧಿ ಸಾಂಘವಿ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸಾಂಘವಿ ಅವರ ತಂದೆ ಪ್ರೊಫೆಸರ್. (ಒನ್‌ಇಂಡಿಯಾ ಕನ್ನಡ)

  English summary
  Kannada actress and model Sanghavi is to marry a US-based doctor on March 5th. Sanghavi's is her screen name .Her real name is "Kavya Ramesh". She did her schooling in Marimallappa School in Mysore. The engagement is due to take place soon and the actress is planning to settle down in the US after the wedding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X