»   » ಸಿಂಧು ಮೆನನ್ ಗೆ ಢುಮ್ ಟಕ ಢುಂ ಢುಂ

ಸಿಂಧು ಮೆನನ್ ಗೆ ಢುಮ್ ಟಕ ಢುಂ ಢುಂ

Posted By:
Subscribe to Filmibeat Kannada

ರಂಭಾ ನಂತರ ಮತ್ತೊಬ್ಬ ತಾರೆ ದಾಂಪತ್ಯ ಜೀವನಕ್ಕೆ ಅಡಿಯಿಡುವ ಸುದ್ದಿ ಬಂದಿದೆ. ಹುಡುಗಿ ಬೆಂಗಳೂರಿನವಳೆ ಆದರೂ, ತೆಲುಗು, ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆಯಾದ್ದರಿಂದ ನಮ್ಮ ಸಿಂಧು ಮೆನನ್ ಮದುವೆ ಸುದ್ದಿ ಕೊಂಚ ತಡವಾಗಿ ತಲುಪಿದೆ. ಬೆಂಗಳೂರು ಮೂಲದ ಈ ಮಲೆಯಾಳಿ ಚೆಲುವೆ ಪಂಚಭಾಷಾನಟಿ ಎಂಬ ಹೆಗ್ಗಳಿಕೆ ಕಳಿಸಿದವರು. ಕೇರಳ ಮೂಲ ಯುವಕ ಈಕೆಯನ್ನು ಕೈಹಿಡಿಯಲು ಮುಂದಾಗಿದ್ದಾನೆ.

ತ್ರಿಸ್ಸೂರು ಮೂಲದ ಉದ್ಯಮಿ ಯುಕೆ ನಿವಾಸಿ ಪ್ರಭು ಅವರನ್ನು ವರಿಸಲಿರುವ ಸಿಂಧು ಮೆನನ್,ಮದುವೆ ನಂತರ ಮತ್ತೆ ಚಿತ್ರರಂಗಕ್ಕೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ,ಇತ್ತೀಚೆಗೆ ಹಾಲಿವುಡ್ ಚಿತ್ರವೊಂದರಲ್ಲಿ ನಟಿಸುವ ಸುವರ್ಣ ಅವಕಾಶವನ್ನು ಸಿಂಧು ಪಡೆದಿದ್ದರು.'ಇಬ್ಬನಿ ತಬ್ಬಿದ ಇಳೆಯಲಿ ರವಿತೇಜ ಹೊಳೆದು ..' ಎಂದು ಹಾಡುತ್ತಾ ಬಾಲನಟಿಯಾಗಿ ಸಿಂಧು ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ನಂತರ ಕೆಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡರೂ ಹೆಚ್ಚು ಸುದ್ದಿ ಮಾಡಿದ್ದು, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ.

ಕನ್ನಡದಲ್ಲಿಪ್ರೇಮ ಪ್ರೇಮ ಪ್ರೇಮ, ನಂದಿ, ಖುಷಿ, ಧರ್ಮ, ಜ್ಯೇಷ್ಠ, ಯಾರೇ ನೀ ಹುಡುಗಿ ಮುಂತಾದ ಚಿತ್ರಗಳಲ್ಲಿ ಸಿಂಧು ನಟಿಸಿದ್ದಾರೆ. ಬೇರೆ ಚಿತ್ರರಂಗದಲ್ಲಿ ಟಾಪ್ ಮೋಸ್ಟ್ ನಟರ ಜೊತೆ ನಟಿಸಿದ್ದರೂ, ಕನ್ನಡದಲ್ಲಿ ಈಕೆಗೆ ಎರಡನೇ ದರ್ಜೆ ನಟರ ಜೊತೆ ಕುಣಿಯುವ ಯೋಗ ಮಾತ್ರ ಲಭಿಸಿತು. ಸುದೀಪ್ , ದರ್ಶನ್ ಜೊತೆ ನಟನೆ ಅವಕಾಶ ಸಿಕ್ಕರೂ, ಕನ್ನಡದಲ್ಲಿ ಜನ ಅಷ್ಟಾಗಿ ಇವರ ಪ್ರತಿಭೆಯನ್ನು ಗುರುತಿಸಿದ್ದು ಕಮ್ಮಿ.

24ರ ಹರೆಯ ಈ ಪ್ರತಿಭಾವಂತ ಯುವತಿ ಸಿಂಧು ಭರತನಾಟ್ಯ ಕಲಾವಿದೆ ಕೂಡ. ಕಾಲೇಜು ದಿನಗಳಿಂದ ಶೇಷಾದ್ರಿಪುರಂನ ಫೇಮಸ್ ಪಾನಿಪುರಿ ಸ್ಟಾಲ್ ಈಕೆಯ ಫೇವರೇಟ್ ಅಡ್ಡಾ. ಸದ್ಯ ಅಕ್ಕನ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿರುವ ಸಿಂಧು ಅವರ ತಮ್ಮ ಕಾರ್ತಿಕ್ ಕೂಡ ಇತ್ತೀಚೆಗೆ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada