»   » ಮುಗುಳುನಗೆ ಬೀರಿದ ಮಂದಹಾಸ

ಮುಗುಳುನಗೆ ಬೀರಿದ ಮಂದಹಾಸ

Posted By:
Subscribe to Filmibeat Kannada

ಅದ್ವಿಕ್ ಮೋಷನ್ ಪಿಕ್ಚರ್‍ಸ್ ಕಂಪನಿ ಲಾಂಛನದಲ್ಲಿ ಎಸ್.ಬಸವರೆಡ್ಡಿ ಅವರು ನಿರ್ಮಿಸುತ್ತಿರುವ 'ಮಂದಹಾಸ' ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದೆ.

ಭದ್ರಾವತಿ ಬಳಿಯ ಸವೈಕಲ್ ಡ್ಯಾಂ, ಚಕ್ರ ಡ್ಯಾಂ ಹಾಗೂ ಸಂತೆಬೆನ್ನೂರಿನಲ್ಲಿ ಎರಡು ಗೀತೆಗಳ ಚಿತ್ರೀಕರಣ ಆಸ್ಕರ್ ಪ್ರಶಸ್ತಿ ವಿಜೇತ, ನೃತ್ಯ ನಿರ್ದೇಶಕ ಲಾಂಜಿ ಫರ್ನಾಂಡಿಸ್ ಅವರ ನೇತೃತ್ವದಲ್ಲಿ ನಡೆದಿದೆ.

ಚಿತ್ರತಂಡದವರು ಚಿತ್ರೀಕರಣದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು ಎಂದು ತಿಳಿಸಿದ ನಿರ್ಮಾಪಕರು ಎರಡು ಡ್ಯಾಂಗಳಲ್ಲಿ ಚಿತ್ರೀಕರಣದ ವೇಳೆ ಸಹಕಾರ ನೀಡಿದ ಪೊಲೀಸ್ ಹಾಗೂ ಅಲ್ಲಿನ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಜನವರಿ 2ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರಾದ ಕೆ.ಎಂ.ವೀರೇಶ್ ತಿಳಿಸಿದ್ದಾರೆ.

ರೇಖಾರೆಡ್ಡಿ ಹಾಗೂ ಜಗದೀಶ್‌ ಪಾಟೀಲ್ ಅವರ ಸಹ ನಿರ್ಮಾಣವಿರುವ ಈ ಚಿತ್ರವನ್ನು ರಾಜೇಶ್ ನಾಯರ್ ನಿರ್ದೇಶಿಸುತ್ತಿದ್ದಾರೆ. ನಿರ್ದೆಶಕರೇ ಕಥೆ, ಚಿತ್ರಕತೆ ಬರೆದಿದ್ದಾರೆ. ಮಂಜು ಮಾಂಡವ್ಯ ಸಂಭಾಷಣೆ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ವೀರಸಮರ್ಥ್ ಸಂಗೀತ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರದ ನಾಯಕರಾಗಿ 'ಜೋಶ್' ಖ್ಯಾತಿಯ ರಾಕೇಶ್ ಹಾಗೂ ಚೇತನ್ ಅಭಿನಯಿಸುತ್ತಿದ್ದು, ನಿಕ್ಕಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಶ್ರೀನಾಥ್, ಮಿತ್ರ, ಅಲೋಕ್, ಆರ್.ಜಿ.ವಿಜಯಸಾರಥಿ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada