»   » ಚಿತ್ರನಟಿ ನಯನತಾರಾ ಹಿಂದು ಧರ್ಮಕ್ಕೆ ಮತಾಂತರ

ಚಿತ್ರನಟಿ ನಯನತಾರಾ ಹಿಂದು ಧರ್ಮಕ್ಕೆ ಮತಾಂತರ

Posted By:
Subscribe to Filmibeat Kannada

ದಕ್ಷಿಣದ ಖ್ಯಾತ ತಾರೆ, 'ಸೂಪರ್' ಚಿತ್ರದ ನಾಯಕಿ ಮಲ್ಲು ಬೆಡಗಿ ನಯನತಾರಾ ಹಿಂದು ಧರ್ಮಕ್ಕೆ ಮತಾಂತರವಾಗಲಿದ್ದಾರೆ. ತಮ್ಮ ಪ್ರಿಯಕರ ಪ್ರಭುದೇವ ಮೇಲಿನ ಮಮಕಾರದಿಂದ ನಯನತಾರಾ ಹಿಂದು ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಮತ್ತು ನಯನತಾರಾ ಕಳೆದ ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿರುವುದು ಗೊತ್ತೇ ಇದೆ.

ಇವರಿಬ್ಬರ ಲಿವ್ ಇನ್ ರಿಲೇಷನ್ ಷಿಪ್ ಬಗ್ಗೆ ಸಾಕಷ್ಟು ಸುದ್ದಿಗಳು, ಗಾಳಿಸುದ್ದಿಗಳು ಈಗಾಗಲೆ ಪ್ರಚಾರದಲ್ಲಿವೆ. ಮುಂಬರುವ ಕೆಲವು ವಾರಗಳಲ್ಲಿ ನಯನತಾರಾ ಹಿಂದು ಧರ್ಮವನ್ನು ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮುಸ್ಲಿಂ ಆಗಿದ್ದ ಪ್ರಭುದೇವಾ ಪತ್ನಿ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದರು.

ಮೂಲತಃ ಕ್ರೈಸ್ತ ಧರ್ಮಕ್ಕೆ ಸೇರಿರುವ ನಯನತಾರಾ ಸಹ ಈಗ ಪ್ರಿಯಕರನಿಗಾಗಿ ತಮ್ಮ ಮೂಲ ಧರ್ಮವನ್ನು ಬಿಡಲು ತೀರ್ಮಾನಿಸಿದ್ದಾರೆ. ಪ್ರಭುದೇವನನ್ನು ಮದುವೆಯಾಗುವುದಕ್ಕೂ ಮುನ್ನ ನಯನತಾರಾ ಹಿಂದುವಾಗಿ ಪರಿವರ್ತನೆಯಾಗಲಿದ್ದಾರೆ ಎಂಬ ಸುದ್ದಿ ದಕ್ಷಿಣ ಭಾರತದಲ್ಲಿ ಸ್ಫೋಟಗೊಂಡಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada