»   » ಓಂ ಸಾಯಿಪ್ರಕಾಶ್ ಕೈಹಿಡಿಯುವಳೇ ವರಮಹಾಲಕ್ಷ್ಮಿ?

ಓಂ ಸಾಯಿಪ್ರಕಾಶ್ ಕೈಹಿಡಿಯುವಳೇ ವರಮಹಾಲಕ್ಷ್ಮಿ?

Posted By:
Subscribe to Filmibeat Kannada
Om Saiprakash
ಸತತ ಸೋಲುಗಳಿಂದ ಕಂಗೆಟ್ಟಿರುವ ನಿರ್ದೇಶಕ ಓಂ ಸಾಯಿಪ್ರಕಾಶ್ ಈಗ 'ವರಮಹಾಲಕ್ಷ್ಮಿ ವ್ರತ' ಕೈಗೊಂಡಿದ್ದಾರೆ. 'ದೇವರು ಕೊಟ್ಟ ತಂಗಿ' ಚಿತ್ರ ಸಾಯಿ ಪ್ರಕಾಶ್ ಅವರ ಬಾಳಿನಲ್ಲಿ ಮರೆಯಲಾಗದ ಕಹಿ ನೆನಪುಗಳನ್ನು ಉಳಿಸಿಹೋಗಿದೆ. ಅವರ ಕೈಯಲ್ಲಿ ಈಗ ಎರಡು ಚಿತ್ರಗಳಿವೆ. ಒಂದು 'ಭ್ರಷ್ಟಾಚಾರ', ಮತ್ತೊಂದು 'ಆದಿ ಚುಂಚನಗಿರಿ ಮಹಾತ್ಮೆ'.

ಈಗ ಮತ್ತೊಂದು ಚಿತ್ರಗನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ವರಮಹಾಲಕ್ಷ್ಮಿ ವ್ರತ' ಮಹಾತ್ಮೆ. ಈಗಾಗಲೆ ಹಲವಾರು ಭಕ್ತಿ ಪ್ರಧಾನ ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ಅಭಿನಯ ಶಾರದೆ ಜಯಂತಿ ಅವರ ಮುದ್ದಿನ ಸೊಸೆ ಅನು ಪ್ರಭಾಕರ್ ಚಿತ್ರದ ನಾಯಕಿ.

ಅನು ಪ್ರಭಾಕರ್ ಅಭಿನಯದ 'ಶ್ರೀ ದಾನಮ್ಮ ದೇವಿ' ಚಿತ್ರ ಯಶಸ್ವಿ 100 ದಿನಗಳನ್ನು ಪೊರೈಸಿತ್ತು. ಉತ್ತರ ಕರ್ನಾಟಕಕ್ಕೆ ಅನು ಅವರೇನಾದರೂ ಭೇಟಿ ನೀಡಿದರೆ ಅವರನ್ನು ಸಾಕ್ಷಾತ್ ದೇವತೆಯಂತೆ ಕಾಣುವ ಭಕ್ತ ಸಮೂಹವೇ ಇದೆ. 'ದಾನಮ್ಮ ದೇವಿ' ಪಾತ್ರ ಅಷ್ಟೊಂದು ಪರಿಣಾಮ ಬೀರಿತ್ತು.

'ನವ ಶಕ್ತಿ ವೈಭವ' ಎಂಬ ಚಿತ್ರದಲ್ಲೂ ಅನು ಪ್ರಭಾಕರ್ ಅಭಿನಯಿಸಿದ್ದರು. 'ಪರೀಕ್ಷೆ' ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ 2009-10ನೇ ಸಾಲಿನ ರಾಜ್ಯ ಪ್ರಶಸ್ತಿಗೂ ಅನು ಭಾಜನರಾಗಿದ್ದಾರೆ. ಓಂ ಸಾಯಿಪ್ರಕಾಶ್ ಈಗ ಅನು ಪ್ರಭಾಕರ್ ಅವರಿಗೆ ವರಲಕ್ಷ್ಮಿ ಪಾತ್ರ ಕೊಟ್ಟಿದ್ದಾರೆ.

ಚಿತ್ರದ ಪಾತ್ರವರ್ಗದಲ್ಲಿ ಹರೀಶ್ ರಾಜ್, ರವಿ ಚೇತನ್, ಬುಲ್ಲೆಟ್ ಪ್ರಕಾಶ್, ಟೆನ್ನಿಸ್ ಕೃಷ್ಣ ಮುಂತಾದವರಿದ್ದಾರೆ. ರಮೇಶ್ ಯಾದವ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಕ್‌ಲೈನ್ ಸ್ಟುಡಿಯೋದಲ್ಲಿ ಅದ್ಭುತ ಸೆಟ್ಟನ್ನು ಹಾಕಲಾಗಿದೆ. ರಾಜೇಶ್ ರಾಮನಾಥ್ ಸಂಗೀತ, ಜೆ ಜಿ ಕೃಷ್ಣ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಾಯಿಪ್ರಕಾಶ್ ಅವರನ್ನು ವರಮಹಾಲಕ್ಷ್ಮಿ ಈ ಬಾರಿಯಾದರೂ ಕೈಹಿಡಿಯುತ್ತಾಳಾ? ಕಾದುನೋಡೋಣ. (ಒನ್‌ಇಂಡಿಯಾ ಕನ್ನಡ)

English summary
Kannada devotional films director Om Saiprakash to direct one more film in Kannada. The movie titled as Varamahalakshmi Vratha. Two times state award winning actress Anu Prabhakar plays the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada