»   » ಎಸ್ ನಾರಾಯಣ್ ನಿವೃತ್ತಿಗೆ ಓದುಗರು ಏನಂತಾರೆ?

ಎಸ್ ನಾರಾಯಣ್ ನಿವೃತ್ತಿಗೆ ಓದುಗರು ಏನಂತಾರೆ?

Posted By:
Subscribe to Filmibeat Kannada
S Narayan
ಕಲಾ ಸಾಮ್ರಾಟ್ ಬಿರುದಾಂಕಿತ ನಿರ್ದೇಶಕ, ನಿರ್ಮಾಪಕ, ನಟ, ಗಾಯಕ...ಎಸ್ ನಾರಾಯಣ್ ಸ್ವಯಂ ನಿವೃತ್ತಿ ಘೋಷಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಬಗ್ಗೆ ನಮ್ಮ ಒನ್‌ಇಂಡಿಯಾ ಕನ್ನಡ ಓದುಗರಿಂದ ಅಭೂತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎಸ್ ನಾರಾಯಣ್ ನಿವೃತ್ತಿ ಬಗ್ಗೆ ಯಾರೊಬ್ಬರೂ ಒಂದೇ ಒಂದು ಹನಿ ಕಣ್ಣೀರನ್ನೂ ಹಾಕಿಲ್ಲ. ಎಲ್ಲರೂ ಅವರು ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಆಯ್ದ ಕೆಲವು ಕಾಮೆಂಟ್‌ಗಳನ್ನು ಇಲ್ಲಿ ಪ್ರಕಟಿಸಲಾಗಿದೆ.ಯಾವತ್ತೋ ಈ ನಿರ್ಧಾರ ಪ್ರಕಟಿಸಬೇಕಾಗಿತ್ತು........ಇಂತಹಾ ಕಲಾಸಾಮ್ರಾಟರು, ರೀಮಕ್ ಕಿಂಗ್‌ಗಳು ಕನ್ನಡ ಚಿತ್ರರಂಗಕ್ಕೆಬೇಕಿಲ್ಲ. ಇವರ ಮಗನಿಗಾಗಿ ಎಲ್ಲ ಕಳೆದುಕೊಂಡರು. ಇಷ್ಟಾದರು ಪ್ರೇಕ್ಷಕರ ಮೇಲೆ ಗೂಬೆ ಕೂರಿಸುವದನ್ನು ಬಿಟ್ಟಿಲ್ಲ - ಗಜಾನನ್ಬಹಳ ಸಂತೋಷ, ತಡವಾಗಿ ಆದರು ಒಳ್ಳೆ ನಿರ್ಧಾರ, ಕನ್ನಡದ ಪ್ರೇಕ್ಷಕನಿಗೆ ಒಳ್ಳೆ ಸುದ್ದಿ, ಬಾಲಿಶವಾದ ಚಿತ್ರಗಳು ಸ್ವಲ್ಪ ಕಡಿಮೆ ಆಗುತ್ತೆ, ಇನ್ನು ಕೆಲವು ನಿರ್ದೇಶಕರು/ನಟರು ಈ ನಿರ್ಧಾರ ತೆಗೆದುಕೊಂಡರೆ ಕನ್ನಡಕ್ಕೆ ಒಳ್ಳೆಯದು- murthyತಮಿಳಲ್ಲಿ ಸೂಪರ್ ಹಿಟ್ ಆಗಿರೋ ಫಿಲಂ remake ಮಾಡಿ ಮಾಡಿ ಅಲಕ್ ಬುಲಕಲ್ಲಿ ಫೇಮಸ್ ಆಗ್ಬಿಟ್ಟಿದ್ದ. ಇವ್ರು ಹಾಳಗೊದಲ್ದೆ ಗಣೇಶನ್ನು ಹಾಳ್ ಮಾಡಿದರು. ಯಾರ್ಗು ನಷ್ಟ ಇಲ್ಲ... ಹೋಗ್ ಬಾರಪ್ಪ ತಂದೆ, ನಮಸ್ಕಾರ :)- Chukkiಅಬ್ಬ ಕೊನೆಗೂ ನಮ್ಮ ಎಸ್ ನಾರಾಯಣನಿಗೆ ದೇವ್ರು ಒಳ್ಳೆ ಬುದ್ಧಿ ಕೊಟ್ಟನಲ್ಲಾ!!!! ಅಲ್ಲಿ ಇಲ್ಲಿ ಕದ್ದ ಮಾಲು ಹಂಚಿ ಇಷ್ಟು ದಿನ ಬದುಕಿದ ಮಹಾನುಭಾವ, ಸ್ವಂತ ಚಿತ್ರ ಮಾಡಿದ್ದರೆ ಹೇಗಿರುತ್ತೆ ಅಂಥ ನೋಡ್ಬೇಕು ಅಂದ್ರೆ ಮೊನ್ನೆ ತೆರೆ ಕಂಡ "ಮುಂಜಾನೆ" ಎಂಬ ಅದ್ಭುತ ಚಿತ್ರ ನೋಡಿದ್ರೆ ಗೊತ್ತಾಗುತ್ತೆ!! ಕನ್ನಡ ಚಿತ್ರರಂಗ ಬದುಕಿತು, ಧನ್ಯವಾದಗಳು ಸ್ವಘೋಷಿತ ಸಾಮ್ರಾಟರೆ!- Vasanth. ಇವಿಷ್ಟೂ ಒನ್‌ಇಂಡಿಯಾ ಕನ್ನಡ ಅಭಿಪ್ರಾಯಗಳಲ್ಲ. ಓದುಗರ ಕಾಮೆಂಟ್‌ಗಳು ಎಂಬುದು ನಿಮ್ಮ ಗಮನಕ್ಕಿರಲಿ. (ಒನ್‌ಇಂಡಿಯಾ ಕನ್ನಡ)

English summary
Read Oneindia Kannada readers response about ace director S Narayan, who was applauded for his blockbuster films like Cheluvina Chitara and Shabdavedi has decided to quit film making.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada