For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

  By Rajendra
  |

  ಅನಾರೋಗ್ಯದಿಂದ ಬಳಲುತ್ತಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್(60) ಅವರನ್ನು ಚಿಕಿತ್ಸೆಗಾಗಿ ಶುಕ್ರವಾರ ಚೆನ್ನೈನ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ತದ ಒತ್ತಡದಿಂದ ಬಳಲುತ್ತಿದ್ದ ಅವರು ತೀವ್ರವಾಗಿ ಅಸ್ವಸ್ಥಗೊಂಡ ಕಾರಣ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರ ಅಭಿಮಾನಿಗಳು ಆತಂಕಪಡುವಂತಹದ್ದು ಏನೂ ಆಗಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ.

  ಚಿಕಿತ್ಸೆ ಬಳಿಕ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಂತೆ ರಜನಿಕಾಂತ್ ಅವರಿಗೆ ವೈದ್ಯರು ಸೂಚಿಸಿದ್ದಾರೆ. ಸದ್ಯಕ್ಕೆ ರಜನಿಕಾಂತ್ ಚೆನ್ನೈನ ಬೊಯೆಸ್ ಗಾರ್ಡನ್‌ನ ತನ್ನ ನಿವಾಸಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಮಹತ್ವಾಕಾಂಕ್ಷಿ 'ರಣಾ' ಚಿತ್ರ ಇತ್ತೀಚೆಗಷ್ಟೇ ಚೆನ್ನೈನ ಎವಿಎಂ ಸ್ಟುಡಿಯೋದಲ್ಲಿ ಸೆಟ್ಟೇರಿತ್ತು.

  ಶೀಘ್ರದಲ್ಲೇ ವಿಶೇಷವಾಗಿ ರೂಪಿಸಿದ ಸೆಟ್‍ನಲ್ಲಿ ದೀಪಿಕಾ ಪಡುಕೋಣೆ ಹಾಗೂ ರಜನಿಕಾಂತ್ ನಡುವೆ ರೊಮ್ಯಾಂಟಿಕ್ ಸಾಂಗ್ ಒಂದನ್ನು ಚಿತ್ರೀಕರಿಸುವುದಾಗಿ ನಿರ್ದೇಶಕ ರಾಜೀವನ್ ತಿಳಿಸಿದ್ದರು. ಆದರೆ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದು ಅವರ ಅಭಿಮಾನಿ ಬಳಗವನ್ನು ಆತಂಕಕ್ಕೆ ದೂಡಿದೆ. ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂಬುದು ಎಲ್ಲರ ಹಾರೈಕೆ.

  English summary
  Superstar Rajinikanth was admitted to a hospital following some blood pressure problems, sources said on Friday. Recently his film Rana opposite Bollywood actress Deepika Padukone kick-start with a formal puja at the AVM Studios, Chennai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X