»   » ಬಾಲಿ ದ್ವೀಪಗಳಿಗೆ ಲಕ್ಕಿ ಸ್ಟಾರ್ ರಮ್ಯಾ ಜಾಲಿ ಟ್ರಿಪ್

ಬಾಲಿ ದ್ವೀಪಗಳಿಗೆ ಲಕ್ಕಿ ಸ್ಟಾರ್ ರಮ್ಯಾ ಜಾಲಿ ಟ್ರಿಪ್

Posted By:
Subscribe to Filmibeat Kannada

ಮೊನ್ನೆಯಷ್ಟೆ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ ಲಕ್ಕಿ ಸ್ಟಾರ್ ರಮ್ಯಾ ಇದೀಗ ರಜಾದಿನಗಳನ್ನು ಜಾಲಿಯಾಗಿ ಕಳೆಯಲು ಬಾಲಿಗೆ ಹಾರಿದ್ದಾರೆ. ಇದೇ ಸಂದರ್ಭದಲ್ಲಿ ರಮ್ಯಾ ಅಭಿನಯದ 'ಸಂಜು ವೆಡ್ಸ್ ಗೀತಾ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 2009ರಲ್ಲಿ ಒಂದೇ ಒಂದು ಚಿತ್ರವನ್ನೂ ಒಪ್ಪಿಕೊಳ್ಳದ ರಮ್ಯಾ 2010ರಲ್ಲಿ ಪುರುಸೊತ್ತಿಲ್ಲದಷ್ಟು ಬ್ಯುಸಿಯಾಗಿದ್ದಾರೆ.

ಕಳೆದ ವಾರ ಚಿರಂಜೀವಿ ಸರ್ಜಾ ಜೊತೆಗಿನ 'ದಂಡಂ ದಶಗುಣಂ' ಚಿತ್ರ ಸೆಟ್ಟೇರಿದೆ. ಇಷ್ಟೆಲ್ಲಾ ಚಿತ್ರಗಳನ್ನು ಕೈಯಲ್ಲಿಟ್ಟುಕೊಂಡಿರುವ ರಮ್ಯಾ ಸದ್ಯಕ್ಕೆ ವಿಶ್ರಾಂತಿ ಬಯಸಿದ್ದಾರೆ. ಹಾಗಾಗಿ ಒಂದು ವಾರ ಕಾಲ ಬಾಲಿ ದ್ವೀಪಗಳಲ್ಲಿ ಜಾಲಿಯಾಗಿ ಕಳೆಯಲಿದ್ದಾರೆ. ಇಷ್ಟಕ್ಕೂ ರಮ್ಯಾ ಬಾಲಿ ದ್ವ್ವೀಪಗಳಲ್ಲಿ ಏನು ಮಾಡುತ್ತಾರೆ?

ಬಾಲಿ ದ್ವ್ವೀಪಗಳಲ್ಲಿ ರಮ್ಯಾ ಸುಮ್ಮನೆ ಕುಳಿತು ಕಾಲ ಕಳೆಯುವುದಿಲ್ಲ. ಜೊತೆಗೆ ಒಂದಷ್ಟು ಪುಸ್ತಕಗಳನ್ನು ಕೊಂಡೊಯ್ದಿದ್ದಾರೆ. ಒಂದು ವಾರದ ಬಳಿಕ ಬೆಂಗಳೂರಿಗೆ ಹಿಂತಿರುಗುತ್ತೇನೆ. ಬಾಲಿಯನ್ನು ನೋಡಲು ಮನಸ್ಸು ತಹತಹ ಎನ್ನುತ್ತಿದೆ ಎನ್ನುವ ರಮ್ಯಾ ಬೆಂಗಳೂರಿಗೆ ಹಿಂತಿರುಗಿದ ಬಳಿಕ "ದಂಡಂ ದಶಗುಣಂ" ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada