»   » ಹೊಡಿ ಗುರು ಹೊಡಿ ಗುರು ಬಿಡಬ್ಯಾಡ ಡೈಲಾಗ್ನ!

ಹೊಡಿ ಗುರು ಹೊಡಿ ಗುರು ಬಿಡಬ್ಯಾಡ ಡೈಲಾಗ್ನ!

By: *ಉದಯರವಿ
Subscribe to Filmibeat Kannada

ಕನ್ನಡ ಚಿತ್ರಗಳ ಕೆಲವೊಂದು ಡೈಲಾಗ್ಸ್ ಗಳನ್ನು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ. ಆದರೆ ಆ ಡೈಲಾಗ್ಸ್ ಸರಿಯಾದ ಟೈಮಿಗೆ ಜ್ಞಾಪಕಕ್ಕೆ ಬರುವುದಿಲ್ಲ. ಊಟಕ್ಕಿಲ್ಲದ ಉಪ್ಪಿನಕಾಯಿ ತರಹ ಚಡಪಡಿಸಬೇಕಾಗುತ್ತದೆ. ಹಾಗೆಯೇ ಅದೇ ಡೈಲಾಗ್ ಗಳನ್ನು ಅನುಕರಿಸಲು ನಾಲಿಗೆ ತುಡಿಯುತ್ತಿರುತ್ತದೆ. ಸ್ಯಾಂಪಲ್ ಗೆಂದು ಕೆಲವೊಂದು ಡೈಲಾಗ್ ಗಳನ್ನುಕೊಡಲಾಗಿದೆ. ಖಂಡಿತವಾಗಿಯೂ ನಿಮಗೆ ಇಷ್ಟ ಆಗಬಹುದು!

ನಿಮ್ ನಗು,ನಿಮ್ ಬ್ಯೂಟಿ,ನಿಮ್ ವಾಯ್ಸ್,ನಿಮ್ ಕೂದ್ಲೂ , ನಿಮ್ ನೋಟ,ಈ ಬಿಕ್‌ನಾಸಿ ಮಳೆ,ನಿಮ್ ಗೆಜ್ಜೆ ಸದ್ದು ವಾಚು,ಆ ರಾಸ್ಕಲ್ ದೇವದಾಸ, ಗಂಟೆ ಸದ್ದು ಎಲ್ಲ ಮಿಕ್ಸ್ ಆಗಿ ನನ್ ಲೈಫಲ್ಲೇ ರಿಪೇರಿ ಮಾಡಕ್ಕಾಗ್ದೆ ಇರೋ ಅಷ್ಟು ಗಾಯ ಮಾಡಿದೆ ಕಣ್ರೀ...ಈ ಡೈಲಾಗ್ ಯಾವ ಚಿತ್ರದ್ದು ಯಾರು ಹೇಳಿದ್ದು ಅಂತ ಇಷ್ಟೊತ್ತಿಗಾಗಲೆ ಅರ್ಥ ಆಗಿಯೇ ಇರುತ್ತದೆ.

ಕರುನಾಡ ಮಣ್ಣಲ್ಲಿ ಹುಟ್ಟಿ, ಕರ್ನಾಟಕದ ಕಾವೇರಿ ನೀರು ಕುಡಿದು, ತಾಯಿ ಭುವನೇಶ್ವರಿಯ ಆಶಿರ್ವಾದ ಪಡೆದ, ನಮ್ಮ ನಿಮ್ಮೆಲ್ಲರ ಈ ಅಣ್ಣನಿಗೆ ಸರಿ ಸಾಟಿ ಯಾರು? ಒಳ್ಳೆಯವರಿಗೆ ಕೊಡುವನು ವರ, ಕೆಟ್ಟವರಿಗೆ ಬಿಡಿಸುವನು ಜ್ವರ...... ಇದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟೈಲ್..ರಾಜ ಆಗೋ ಅಸೆ ಇದ್ರೆ ರಾಜ್ಯ ಗೆಲ್ಲೋ ತಾಕತ್ ಇರಬೇಕು.... ಯುದ್ದಕ್ಕೆ ಅಂತ ನಿಂತಮೇಲೆ ಸೈನಿಕ್ರನ್ನ ಲೆಕ್ಕ ಹಾಕಬಾರದು...ಹೆಂಗಿದೆ ಪಂಚಿಂಗ್ ಡೈಲಾಗ್!

ದುನಿಯಾ ವಿಜಯ್ ಸ್ಟೈಲಲ್ಲಿ ಒಂದು ಡೈಲಾಗ್....ಅಲ್ಲಾ ಏನು ಜನಾ ಕಪ್ಪುಗಿದ್ದು, ಅರಕುಲು ಬಟ್ಟೆ ಹಾಕ್ಕೊಂಡುಬುಟ್ರೆ ಕಳ್ಳರ ತರಾನೇ ಕಾಣಿಸ್ತೀವಿ ಅಲ್ವಾ. ಬಾ...ಬಾ...ಇಳಿ ಕೆಳಕ್ಕೆ....ಬದುಕೋದಿಕ್ಕೆ ನಂಬಿಕೆ ಬೇಕು. ನನ್ನ ಹತ್ತಿರ ಇರೊದು 2 ಟೊಮಟೊ ಮತ್ತೆ 10ರೂ ಕಣಣ್ಣ...

ಪ್ಯೂಚರ್ ಇಲ್ದಿರೋ ದೇಶ, ನೇಚರ್ ಇಲ್ದಿರೋ ನಾಡು, ಟೀಚರ್ಸ್ ಇಲ್ದಿರೋ ಸ್ಕೂಲ್ಸು, ಲೀಡರ್ಸ್ ಇಲ್ದಿರೋ ಪಾರ್ಟೀಸ್, ಪ್ಲಾನಿಂಗ್ ಇಲ್ದಿರೋ ಫ್ಯಾಮಿಲೀಸು, ಒಬ್ಬೊಬ್ಬನಿಗೆ ಡಜನ್ ಡಜನ್ ಮಕ್ಳು, ಅದ್ರಲ್ಲಿ ಅರ್ಧ ಪುಕ್ಲು, ಇನ್ನರ್ಧ ತಿಕ್ಳು ತಿಕ್ಳು....ಈ ಡೈಲಾಗ್ ಯಾರ್ದು ಅಂತ ಅರ್ಥ ಆಗಿಯೇ ಇರುತ್ತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada