For Quick Alerts
  ALLOW NOTIFICATIONS  
  For Daily Alerts

  ಸಾಹಸಸಿಂಹ ಜೊತೆ ವಾಸು ಇನ್ನೂ ಮಾತನಾಡುತ್ತಿದ್ದಾರಂತೆ

  By Rajendra
  |

  ಸಾಹಸಸಿಂಹ ಡಾ.ವಿಷ್ಣುವರ್ಧನ್ ಕನ್ನಡ ಚಿತ್ರಪ್ರೇಮಿಗಳನ್ನು ಅಗಲಿ ಎರಡು ವರ್ಷಗಳೇ ಉರುಳಿ ಹೋಗಿವೆ. ಅವರ ನೆನಪು ಮಾತ್ರ ಇನ್ನೂ ಸದಾ ಹಸಿರಾಗಿದೆ. ಆದರೆ ವಿಷ್ಣು ಅವರ 200ನೇ ಚಿತ್ರ 'ಆಪ್ತರಕ್ಷಕ' ನಿರ್ದೇಶಿಸಿದ ಪಿ ವಾಸು ಅವರೊಂದಿಗೆ ವಿಷ್ಣೂಜಿ ಇನ್ನೂ ಮಾತನಾಡುತ್ತಲೇ ಇದ್ದಾರಂತೆ.

  'ಆಪ್ತರಕ್ಷಕ' ಚಿತ್ರದಲ್ಲಿ ವಿಷ್ಣು ತ್ರಿಪಾತ್ರಾಭಿನಯ ಪೋಷಿಸಿದ್ದರು. ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಪಿ ವಾಸು, ನಿಮಗೆ ಆಶ್ಚರ್ಯವಾಗಬಹುದು. ನಾನು ವಿಷ್ಣು ಜೊತೆ ಇನ್ನೂ ಮಾತನಾಡುತ್ತಿದ್ದೇನೆ. ಅವರು ನನ್ನನ್ನು ಆಶೀರ್ವದಿಸುತ್ತಲೇ ಇದ್ದಾರೆ ಎಂದಿದ್ದಾರೆ.

  ಚೆನ್ನೈನ ನನ್ನ ಕಚೇರಿಯಲ್ಲಿ ಎರಡೇ ಎರಡು ಫೋಟೋಗಳಿವೆ. ಒಬ್ಬರು ನನ್ನ ಗುರುಗಳಾದ ಶ್ರೀಧರ್ ಅವರದು. ಇನ್ನೊಂದು ಡಾ.ವಿಷ್ಣುವರ್ಧನ್ ಅವರದು. ಅವರೊಂದಿಗೆ ಮಾಡಿದ ಎರಡು ಚಿತ್ರಗಳು ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿವೆ. ನಾನು ಸಾಯುವವರೆಗೂ ಅವರನ್ನು ಮರೆಯಲ್ಲ ಎಂದಿದ್ದಾರೆ ಭಾವುಕರಾಗಿ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Will Sahasasimha Dr.Vishnuvardhan still speaks with director P Vasu, who made Aptha Rakshaka, the last film of Dr. Vishnu? Recently he said, You may be astonished. I talk to Vishnu and he blesses me.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X