»   »  ಗಾಂಧಿಜಯಂತಿಗೆ ನವಿರಾದ ಪ್ರೇಮಕಥೆ 'ಜಾಲ'

ಗಾಂಧಿಜಯಂತಿಗೆ ನವಿರಾದ ಪ್ರೇಮಕಥೆ 'ಜಾಲ'

Subscribe to Filmibeat Kannada

ಜೋಶಿಸ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಜಾಲ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ನರಸಿಂಹ ಜೋಶಿ ತಿಳಿಸಿದ್ದಾರೆ. ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಂ ಅವರ ಬಳಿ ಸಹಾಯಕರಾಗಿದ್ದ ನಾಗನಾಥ ಜೋಶಿ ಹಲವು ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ನವಿರಾದ ಪ್ರೇಮಕಥೆಯೊಂದಿಗೆ ಕುತೂಹಲಭರಿತ ಸನ್ನಿವೇಶಗಳು ಚಿತ್ರದಲ್ಲಿದ್ದು, ನೋಡುಗರ ಪ್ರಶಂಸೆಗೆ 'ಜಾಲ' ಪಾತ್ರವಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಬೆಂಗಳೂರು, ಶಿರಸಿ ಹಾಗೂ ಸುತ್ತಲ್ಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ 'ಜಾಲ' ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕತೆ ಬರೆದಿದ್ದಾರೆ.

ಚಂದ್ರು ಬೆಳವಂಗಲ ಛಾಯಾಗ್ರಹಣ, ಮದನ್ ಮೋಹನ್ ಸಂಗೀತ, ರಾಜಶೇಖರ್ ಹೆಗಡೆ ಸಂಭಾಷಣೆ, ಶ್ರೀಕಾಂತ್ ತೆಂಗಿನತೋಟ ಸಂಕಲನ, ನಾಗನಾಥ ಜೋಶಿ, ರಾಜಶೇಖರ ಹೆಗಡೆ, ಮೋಹನ್ ಗೀತರಚನೆ, ಅಲ್ಟಿಮೆಟ್ ಶಿವು ಸಾಹಸ, ಕಪಿಲ್ ನೃತ್ಯ, ಬಾಬುಖಾನ್ ಕಲೆ, ಸತೀಶ್ ಸಹನಿರ್ದೇಶನ, ಶಿವಕುಮಾರ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಚೇತನ್, ದೀಪು, ಪದ್ಮಿನಿ, ಪೂರ್ವಿ, ಅರವಿಂದ್‌ಶ್ರೀನಿವಾಸ್, ದಿನೇಶ್ ನಾಯಕ್, ಮಮತಾ, ಮಾರಿಮುತ್ತು, ಪ್ರಣವಮೂರ್ತಿ, ರಂಗನಾಥ್ ಹಾಗೂ ಮಿಲ್ಟ್ರಿ ಮಂಜು ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada