»   » ಕಪಾಳಮೋಕ್ಷ ಮಾಡಿಸಿಕೊಂಡ ಪೇದೆಯ ಪೇಚಾಟ

ಕಪಾಳಮೋಕ್ಷ ಮಾಡಿಸಿಕೊಂಡ ಪೇದೆಯ ಪೇಚಾಟ

Posted By:
Subscribe to Filmibeat Kannada
Traffic police Shivkumar
ನಿಜಕ್ಕೂ ಈ ಪೊಲೀಸ್ ಪೇದೆಯ ಪೇಚಾಟ ಆ ಶತ್ರುವಿಗೂ ಬೇಡ! ನಟಿ ಮೈತ್ರೇಯಿ ಕೈಯಿಂದ ಕಪಾಳಮೋಕ್ಷ ಮಾಡಿಸಿಕೊಂಡ ಟ್ರಾಫಿಕ್ ಕಾನಿಸ್ಟೇಬಲ್ ಶಿವಕುಮಾರ್ ಈಗ ಸಂಕೋಚದ ಮುದ್ದೆಯಾಗಿದ್ದಾರೆ. ಕಂಡಕಂಡವರೆಲ್ಲಾ ಅವರನ್ನು ಹೌದಾ ಸಾರ್ ನಿಮ್ಮನ್ನು ಯಾರೋ ನಟಿ ಹೊಡೆದರಂತೆ ಎಂದು ಕೇಳುತ್ತಿದ್ದಾರಂತೆ.

ನಟಿ ಮೈತ್ರೇಯಿ ಪ್ರಕರಣವನ್ನು ರಾಜ್ಯದ 24/7 ನ್ಯೂಸ್ ಚಾನಲ್‌ಗಳು ಹಾಕಿ ಚಚ್ಚುದ್ದೇ ತಡ, ದಿನ ಬೆಳಗಾಗುವುದರಲ್ಲಿ ಪೇದೆ ಶಿವಕುಮಾರ್ ಫೇಮಸ್ ಆಗಿಬಿಟ್ಟಿದ್ದರು. ಮನೆಯಲ್ಲೇ ಕೂತು ಲೈವ್‌ನಲ್ಲಿ ನೋಡಿದ ಈತನ ಹೆಂಡತಿ, ಮಕ್ಕಳು, "ನಟಿ ಕೈಲಿ ನೀವು ಹೊಡೆಸಿಕೊಂಡರಂತೆ ಹೌದಾ?" ಎಂದು ಕೇಳುತ್ತಿದ್ದಾರಂತೆ.

ಒಟ್ಟಿನಲ್ಲಿ ಮಹಿಳೆಯೊಬ್ಬರ ಕೈಲಿ ಏಟು ತಿಂದ ಎಂಬ ಮಾತುಗಳು ಕಿವಿಗೆ ಬೀಳುತ್ತಿವೆಯಂತೆ. ಇದರಿಂದ ಆತ ತೀವ್ರ ಮುಖಭಂಗ ಅನುಭವಿಸುವಂತಾಗಿದ್ದು, ಮಾನಸಿಕ ನೆಮ್ಮದಿಗಾಗಿ ತನಗೆ ಒಂದೆರಡು ದಿನ ರಜೆ ಕೊಡಿ ಎಂದು ಉನ್ನತ ಅಧಿಕಾರಿಗಳಲ್ಲಿ ವಿನಂತಿಸಿಕೊಂಡಿದ್ದಾರಂತೆ. "ನಟಿ ಕೈಲಿ ಹೊಡೆತ ತಿಂದರಂತೆ ಹೌದಾ" ಎಂಬ ಪ್ರಶ್ನೆ ಪದೇ ಪದೇ ಆತನ ಕಿವಿಗೆ ಕಾದಸೀಸ ಸುರಿದಂತಾಗುತ್ತಿದೆಯಂತೆ.

ಅಂದಹಾಗೆ ಎಂ ಶಿವಕುಮಾರ್ ಮೂಲತಃ ಚನ್ನಪಟ್ಟಣ್ಣ ತಾಲೂಕಿನವರು. ಪ್ರತಿನಿತ್ಯ ಈತನ ಮೊಬೈಲಿಗೆ 300 ಕರೆಗಳು ಬರುತ್ತಿವೆಯಂತೆ. ಎಲ್ಲರದೂ ಒಂದೇ ಪ್ರಶ್ನೆ, "ಸಾರ್ ಆ ಯಮ್ಮಾ ಯಾರೋ ನಿಮ್ಮನ್ನು ಹೊಡೆದರಂತೆ ಹೌದಾ?". ಶಿವಕುಮಾರ್‌ಗೆ ಬರುತ್ತಿರುವ ಕಿರಿಕಿರಿ ಕರೆಗಳು ಅವರನ್ನು ಪರಪರ ಎಂದು ಕೆರೆದುಕೊಳ್ಳುವಂತೆ ಮಾಡಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
The traffic cop who was allegedly assaulted by Kannada television actress Maitreyi, claims to have slipped into depression after the incident and wants to be granted leave. The incident was telecast across television news channels and has caused a flutter among Shivkumar's family members, thereby adding to his embarrassment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada