»   » ರಘು ಮುಖರ್ಜಿ ಜೊತೆ ಪೂಜಾಗಾಂಧಿ ಚಿತ್ರ

ರಘು ಮುಖರ್ಜಿ ಜೊತೆ ಪೂಜಾಗಾಂಧಿ ಚಿತ್ರ

Posted By:
Subscribe to Filmibeat Kannada

'ಅನು' ಚಿತ್ರಕ್ಕೆ ಆಕ್ಷನ್, ಕಟ್ ಹೇಳಿದ್ದ ಶಿವಗಣಪತಿ ಈಗ ಸಾಮಾಜಿಕ ಪಿಡುಗಿನ ಕುರಿತ ಸ್ವಮೇಕ್ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ 'ಸವಾರಿ' ಖ್ಯಾತಿಯ ರಘು ಮುಖರ್ಜಿ ನಾಯಕ ನಟ. ಇನ್ನೂ ಹೆಸರಿಡ ಈ ಚಿತ್ರಕ್ಕೆ ಪೂಜಾಗಾಂಧಿ ನಾಯಕಿ.

ಕೆಲ ದಿನಗಳ ಹಿಂದಷ್ಟೆ ಪೂಜಾಗಾಂಧಿ ಸ್ವಯಂ ಘೋಷಿತ ಬಿಡುವು ಘೊಷಿಸಿಕೊಂಡಿದ್ದರು. ಈಗ ಆ ಶಪಥವನ್ನು ಮುರಿದು ಈ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹದಿನೈದು ದಿನ ವಿಶ್ರಾಂತಿ ಮುಗಿಯುವ ಮುನ್ನವೇ ಹಾಜರಿ ಹೇಳಿರುವ ಪೂಜಾ ಅಚ್ಚರಿ ಮೂಡಿಸಿದ್ದಾರೆ.

ಅಂದಹಾಗೆ ಈ ಹೊಸ ಚಿತ್ರಕ್ಕೆ ಸುರೇಂದ್ರ ರೆಡ್ಡಿ ಛಾಯಾಗ್ರಹಣ, ಆಸ್ಟಿನ್ ಸಂಗೀತ ನಿರ್ದೇಶನವಿರುತ್ತದೆ. ಏತನ್ಮಧ್ಯೆ ಕಳೆದ ವರ್ಷ ಪೂಜಾಗಾಂಧಿ ನಟಿಸಿದ್ದ 'ಶ್ರೀ ಹರಿಕಥೆ' ಹಾಗೂ 'ತವರಿನ ಋಣ' ಚಿತ್ರಗಳು ಬಿಡುಗಡೆಗಾಗಿ ಕಾದಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada