»   »  ಸಿದ್ಧಲಿಂಗು ಚಿತ್ರದಲ್ಲಿ ರಮ್ಯಾ ಜತೆ ಲೂಸ್ ಮಾದ

ಸಿದ್ಧಲಿಂಗು ಚಿತ್ರದಲ್ಲಿ ರಮ್ಯಾ ಜತೆ ಲೂಸ್ ಮಾದ

Subscribe to Filmibeat Kannada

ಯೋಗೀಶ್ ಅಲಿಯಾಸ್ ಲೂಸ್ ಮಾದನ ಬಹುದಿನಗಳ ಕನಸು ನನಸಾಗುವ ಕಾಲ ಸಮೀಪಿಸಿದೆ. ನಟಿ ರಮ್ಯಾ ಅವರೊಂದಿಗೆ ಅಭಿನಯಿಸಬೇಕು ಎಂದು ಯೋಗೀಶ್ ಕನಸು ಕಂಡಿದ್ದ. ಆಕೆಯ ಜತೆ ಒಂದೇ ಒಂದು ಚಿತ್ರದಲ್ಲಾದರೂ ಅಭಿನಯಿಸಬೇಕು ಎಂದು ಹಂಬಲಿಸುತ್ತಿದ್ದ. ಇದೀಗ ಆ ದಿನ ಬಂದೇ ಬಿಟ್ಟಿದೆ!

ವಿಜಯಪ್ರಸಾದ್ ನಿರ್ದೇಶನದ ಈ ಚಿತ್ರಕ್ಕೆ 'ಸಿದ್ಧಲಿಂಗು' ಎಂದು ಹೆಸರಿಡಲಾಗಿದೆ. ಹೆಸರೇ ಸೂಚಿಸುವಂತೆ ಇದೊಂದು ಪಕ್ಕಾ ಹಾಸ್ಯ ಚಿತ್ರ. ತಮಿಳು ನಟ ನಾಸಿರ್ ಸಹ ಚಿತ್ರದ ಮುಖ್ಯಪಾತ್ರದಲ್ಲಿ ಕಾಣಿಸಲಿದ್ದಾರೆ. ಚಿತ್ರದ ತಾಂತ್ರಿಕ ವರ್ಗ, ಇತರೆ ತಾರಾಬಳಗ ಇನ್ನೂ ಅಂತಿಮವಾಗಿಲ್ಲ.

ಇಷ್ಟು ದಿನ ರಮ್ಯಾರನ್ನು ತಮ್ಮ ಹಯಬುಸಾ ಬೈಕಿನಲ್ಲಿ ಕೂರಿಸಿಕೊಂಡು ಖುಷಿಪಡುತ್ತಿದ್ದ ಯೋಗೀಶ್ ಗೆ ಇದೀಗ ಹೊಸ ಅವಕಾಶ ಸಿಕ್ಕಂತಾಗಿದೆ. ಸಿದ್ಧಲಿಂಗು ಚಿತ್ರದಲ್ಲಿ ರಮ್ಯಾ ಜೊತೆ ಯೋಗೀಶ್ ಏನಿದು ಶಿವಲಿಂಗು ಎಂದು ಹಾಡುತ್ತಾ ಮಿಂಚಲು ಅಡ್ಡಿಯಿಲ್ಲ ಎನ್ನುತ್ತವೆ ಮೂಲಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada