»   »  ಅ.30ರಿಂದ ಸಮುದಾಯ ಚಿತ್ರೋತ್ಸವ

ಅ.30ರಿಂದ ಸಮುದಾಯ ಚಿತ್ರೋತ್ಸವ

Subscribe to Filmibeat Kannada

ಸಮುದಾಯ ಚಿತ್ರೋತ್ಸವ 2009 ಸಮಾಜಮುಖಿ ಚಿತ್ರಗಳ ಪ್ರದರ್ಶನ ಅಕ್ಟೋಬರ್ 30ರಿಂದ ನವೆಂಬರ್ 5ರವರೆಗೂ ನಡೆಯಲಿದೆ. ಕಲಾಚಿತ್ರಗಳ ಪ್ರದರ್ಶನಕ್ಕೆ ಬೆಂಗಳೂರಿನ ಕೈಲಾಷ್ ಚಿತ್ರಮಂದಿರ ಸಜ್ಜಾಗಿದೆ. ಈ ಚಲನಚಿತ್ರ ಜಾತ್ರೆಯಲ್ಲಿ ಅಪೂರ್ವ ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಬಹುದು.

ಈ ನಿಟ್ಟಿನಲ್ಲಿ ಕೆ. ಶಿವರುದ್ರಯ್ಯನವರ 'ದಾಟು', ಅಭಯಸಿಂಹರ 'ಗುಬ್ಬಚ್ಚಿಗಳು', ಉಮಾಶಂಕರ್ ಸ್ವಾಮಿಯವರ 'ಬನದ ನೆರಳು', ಬಿ. ಸುರೇಶ ಅವರ 'ಅರ್ಥ' ಈ ನಾಲ್ಕು ಚಿತ್ರಗಳ ನಿರ್ಮಾಪಕರನ್ನು ಸಪರ್ಕಿಸಿ ಅವರ ಸಹಕಾರದೊಂದಿಗೆ ಪ್ರಥಮ ಬಾರಿಗೆ ನಗರದ ಕೈಲಾಷ್ ಚಿತ್ರಮಂದಿರದಲ್ಲಿ ಅಕ್ಟೋಬರ್ 30ರಿ೦ದ 7 ದಿನಗಳ ಸಮುದಾಯ ಚಿತ್ರೋತ್ಸವ 2009 ಆಯೋಜಿಸಲಾಗಿದೆ.

ಸಮುದಾಯ ಚಲನಚಿತ್ರೋತ್ಸವಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಆಗಮಿಸಲಿದ್ದಾರೆ. 70ರ ದಶಕದಲ್ಲಿ ಸಾಹಿತಿಗಳು, ರಂಗಕಲಾವಿದರು, ಚಿತ್ರಕಲಾವಿದರು ಒಂದೆಡೆ ಸೇರಿ ಹುಟ್ಟಿಕೊಂಡ ಸಂಸ್ಥೆಯೇ ಸಮುದಾಯ.

ಕಳೆದ 34 ವರ್ಷಗಳಿಂದ ನಾಡಿನಾದ್ಯಂತ ಬೀದಿ ನಾಟಕ ಮತ್ತು ರಂಗಚಳುವಳಿಯ ಮೂಲಕ ಮನೆಮಾತಾಗಿದೆ. ಸಮುದಾಯ ಸಮಾಜಮುಖಿ ಚಿತ್ರಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಚಿತ್ರ ಸಮುದಾಯ ಎಂಬ ಉಪ ಸಮಿತಿ ಹುಟ್ಟಿಕೊಂಡಿತು. ಈ ಮೂಲಕ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಜನರು ಸದಭಿರುಚಿಯ ಚಿತ್ರಗಳನ್ನು ನೋಡುವ ಹವ್ಯಾಸ ಬೆಳೆಸುವ ದಿಕ್ಕಿನಲ್ಲಿ ಸಮುದಾಯ ಪ್ರಯತ್ನ ಸಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ರವೀಂದ್ರನಾಥ ಸಿರಿವರ- 98441 09706
ವೆಂಕಟೇಶ್ ಪ್ರಸಾದ್- 99001 82400

ಪ್ರದರ್ಶನಗೊಳ್ಳಲಿರುವ ಚಿತ್ರಗಳ ದಿನಾಂಕ ಮತ್ತು ಸಮಯ

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada