»   »  ಸುದೀಪ್ ತೆಕ್ಕೆಗೆ ನಾಡೋಡಿಗಳ್ ರೀಮೇಕ್ ಹಕ್ಕು?

ಸುದೀಪ್ ತೆಕ್ಕೆಗೆ ನಾಡೋಡಿಗಳ್ ರೀಮೇಕ್ ಹಕ್ಕು?

Subscribe to Filmibeat Kannada

ತಮಿಳಿನ 'ನಾಡೋಡಿಗಳ್'ಸೂಪರ್ ಹಿಟ್ ಚಲನಚಿತ್ರದ ರೀಮೇಕ್ ಹಕ್ಕುಗಳನ್ನು ಭರ್ಜರಿ ಬೆಲೆ ತೆತ್ತು ನಟ ಸುದೀಪ್ ಖರೀದಿಸಿದ್ದಾರೆ. ರು.40 ಲಕ್ಷಕ್ಕೆ ನಾಡೋಡಿಗಳ್ ರೀಮೇಕ್ ಹಕ್ಕುಗಳನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಗುಲ್ಲೆಬ್ಬಿಸಿದೆ.

ಕನ್ನಡಕ್ಕೆ ರೀಮೇಕ್ ಆಗುತ್ತಿರುವ ನಾಡೋಡಿಗಳ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಸ್ಫೋಟಗೊಂಡಿತ್ತು. ಈಗ ಸುದೀಪ್ ರೀಮೇಕ್ ಹಕ್ಕುಗಳನ್ನು ಖರೀದಿಸುವ ಮೂಲಕ ಹೊಸ ತಿರುವು ಪಡೆದುಕೊಂಡಿದೆ. ತಮಿಳಿನಲ್ಲಿ ಈ ಚಿತ್ರವನ್ನು ಸಮುತ್ತಿರಕನಿ ನಿರ್ದೇಶಿಸಿದ್ದರು. ಕನ್ನಡದ ಅವತರಣಿಕೆಯನ್ನು ಅವರೇ ನಿರ್ದೇಶಿಸಲಿದ್ದಾರಂತೆ.

ನಾಡೋಡಿಗಳ್ ಚಿತ್ರ ಹಿಂದಿ ಮತ್ತು ತೆಲುಗು ಭಾಷೆಗಳಿಗೂ ರೀಮೇಕ್ ಆಗುತ್ತಿದೆ. ತೆಲುಗಿನಲ್ಲಿ ರವಿತೇಜ ಹಾಗೂ ಹಿಂದಿಯಲ್ಲಿ ದೇವ್ ಪಟೇಲ್ ಮುಖ್ಯ ಪಾತ್ರದಲ್ಲಿಅಭಿನಯಿಸಲಿದ್ದಾರೆ. ಈ ಎಲ್ಲಾ ಚಿತ್ರಗಳ ನಿರ್ದೇಶನ ಸಾರಥ್ಯವನ್ನು ಸಮುತ್ತಿರಕನಿ ಅವರೇ ಹೊತ್ತಿರುವುದು ವಿಶೇಷ.

ಏತನ್ಮಧ್ಯೆ ರೀಮೇಕ್ ಚಿತ್ರಗಳ ಸರದಾರನಾಗಿರುವ ಸುದೀಪ್ ಮತ್ತೊಂದು ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಲಿದ್ದಾರೆ. ರಾಮ್ ಗೋಪಾಲ್ ವರ್ಮಾರ 'ಸರ್ಕಾರ್' ಚಿತ್ರವನ್ನು ಅವರು ಕನ್ನಡಕ್ಕೆ ತರುತ್ತಿದ್ದಾರೆ. ಸದ್ಯಕ್ಕೆ 'ಜಸ್ಟ್ ಮಾತ್ ಮಾತಲ್ಲಿ' ಸುದೀಪ್ ಮುಳುಗಿದ್ದಾರೆ. ಆದಾದ ಬಳಿಕ ಈ ಹೊಸ ಯೋಜನೆಗಳು ಚಾಲನೆ ಪಡೆಯಲಿವೆ .

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada