»   » 'ರಾಂಬೋ 2' ಜೊತೆಗೆ ನಾಳೆ ತೆರೆಗೆ ಮತ್ತೆರಡು ಸಿನಿಮಾಗಳು

'ರಾಂಬೋ 2' ಜೊತೆಗೆ ನಾಳೆ ತೆರೆಗೆ ಮತ್ತೆರಡು ಸಿನಿಮಾಗಳು

Posted By:
Subscribe to Filmibeat Kannada

ಒಂದು ಕಡೆ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಘಟನೆಗಳು ಸಿನಿಮಾದ ರೀತಿ ರೋಚಕತೆಯಿಂದ ಕೂಡಿವೆ. ಎಲ್ಲಿ ನೋಡಿದರೂ ಬರೀ ರಾಜಕೀಯದೆ ಮಾತುಕತೆ ನಡೆಯುತ್ತಿದೆ. ಆದರೆ ಇದರ ಮಧ್ಯೆ ಕನ್ನಡ ಜನರ ಮನರಂಜನೆಗಾಗಿ ಈ ವಾರ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿದೆ.

ನಟ ಶರಣ್ ಅವರ 'ರಾಂಬೋ 2' ಸಿನಿಮಾ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. ಈಗಾಗಲೇ ಹಾಡುಗಳ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ನಾಳೆ ತೆರೆಗೆ ಬರುತ್ತಿದೆ. 'ರಾಂಬೋ 2' ಜೊತೆಗೆ 'ಪಾರ್ಥಸಾರಥಿ' ಹಾಗೂ 'ಸದ್ದು' ಚಿತ್ರ ಕೂಡ ನಾಳೆಯೇ ಚಿತ್ರಮಂದಿರಕ್ಕೆ ಕಾಲಿಡುತ್ತಿದೆ.

ಅಂದಹಾಗೆ, ನಾಳೆ ಬಿಡುಗಡೆಯಾಗುತ್ತಿರುವ ಮೂರು ಕನ್ನಡ ಸಿನಿಮಾಗಳ ವಿವರ ಮುಂದಿದೆ ಓದಿ..

'ರಾಂಬೋ 2'

ನಟ ಶರಣ್ ಅಭಿನಯದ 'ರಾಂಬೋ 2' ಸಿನಿಮಾದ ಎಲ್ಲ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಈಗ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಶರಣ್ ಜೊತೆಗೆ ನಟಿ ಆಶಿಕಾ ರಂಗನಾಥ್ ಹಾಗೂ ನಟ ಚಿಕ್ಕಣ್ಣ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅನಿಲ್ ನಿರ್ದೇಶನ ಮಾಡಿದ್ದಾರೆ. ತರುಣ್ ಸುಧೀರ್ ಸಿನಿಮಾದ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 'ರಾಂಬೋ' ಸಿನಿಮಾದ ನಂತರ ಈಗ 'ರಾಂಬೋ 2' ಸಹ ರಿಲೀಸ್ ಆಗುತ್ತಿದೆ.

'ಸದ್ದು'

ಹೊಸಬರ ಸದ್ದು ಸಿನಿಮಾ ಸಹ ನಾಳೆ ಚಿತ್ರಮಂದಿರಕ್ಕೆ ಬರುತ್ತಿದೆ. ನಿಖಿತಾ ಸ್ವಾಮಿ, ಭರತ್, ಭಾಗ್ಯ, ಅರ್ಶಿತಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅರುಣ್ ನಿರ್ದೇಶನ ಚಿತ್ರಕ್ಕಿದೆ. 'ಸದ್ದು' ಒಂದು ಹಾರರ್ ಥ್ರಿಲ್ಲರ್ ಸಿನಿಮಾವಾಗಿದೆ. ವೆಂಕಟೇಶ್ ಜೋಷಿ ಸಂಗೀತ ನೀಡಿದ್ದಾರೆ.

'ಪಾರ್ಥಸಾರಥಿ'

'ಪಾರ್ಥಸಾರಥಿ' ಸಿನಿಮಾ ಸಹ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಉದಯ ಟಿವಿಯಲ್ಲಿ ಪ್ರಸಾರವಾಗಿದ್ದ 'ಮೀನಾಕ್ಷಿ ಮದುವೆ' ಧಾರಾವಾಹಿಯಲ್ಲಿ ನಟಿಸಿದ್ದ ರೇಣುಕ್ ಕುಮಾರ್ ಈ ಸಿನಿಮಾದ ಹೀರೋ ಆಗಿದ್ದಾರೆ. ಅವರಿಗೆ ಅಕ್ಷತ ಶ್ರೀಧರ್ ಜೋಡಿ ಆಗಿದ್ದಾರೆ. ಚಿತ್ರದಲ್ಲಿ ಐಪಿಎಸ್ ಪಾತ್ರದಲ್ಲಿ ರೇಣುಕ್ ಕಾಣಿಸಿಕೊಂಡಿದ್ದಾರೆ.

ನಿಮ್ಮ ಆಯ್ಕೆ ಯಾವುದು?

ಈ ಮೂರು ಸಿನಿಮಾಗಳಲ್ಲಿ ನಾಳೆ ನೀವು ನೋಡಲು ಬಯಸುವ ಸಿನಿಮಾ ಯಾವುದು ಎಂಬುದನ್ನು ಕೆಳಗಿನ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.

English summary
3 kannada movies are releasing on may 18th. Actor Sharan's Rambo 2, Parthasarathy and Saddu kannada movies will release day after tomorrow (may 18th).

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X