For Quick Alerts
  ALLOW NOTIFICATIONS  
  For Daily Alerts

  ಮೂವರು ಯಂಗ್ ಸ್ಟಾರ್ ಗಳ ಜೊತೆ ಚಾಲೆಂಜಿಂಗ್ ಸ್ಟಾರ್

  |

  ಕನ್ನಡದ ಮೂರು ಯಂಗ್ ಸ್ಟಾರ್ ಗಳು ಇದೀಗ ನಟ ದರ್ಶನ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಅಭಿಷೇಕ್ ಅಂಬರೀಶ್, ನಿರೂಪ್ ಭಂಡಾರಿ ಹಾಗೂ ಪ್ರಣವ್ ದೇವರಾಜ್ ಡಿ ಬಾಸ್ ಜೊತೆಗೆ ಕಾಣಿಸಿಕೊಂಡಿದ್ದಾರೆ.

  ಸಂಕ್ರಾಂತಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ 'ಯಜಮಾನ'

  ಅಭಿಷೇಕ್ ಅವರ 'ಅಮರ್' ಸಿನಿಮಾದ ಒಂದು ವಿಶೇಷ ಪಾತ್ರದಲ್ಲಿ ದರ್ಶನ್ ನಟಿಸುತ್ತಿರುವ ವಿಷಯ ಇತ್ತೀಚಿಗಷ್ಟೆ ಹೊರ ಬಂದಿತ್ತು. ಈಗ ಈ ಸಿನಿಮಾದಲ್ಲಿ ಇನ್ನಿಬ್ಬರು ನಟರು ಇದ್ದಾರೆ ಎಂಬುದು ತಿಳಿದಿದೆ.

  ಚಿತ್ರದ ಚಿತ್ರೀಕರಣದಲ್ಲಿ ಭಾಗವಯಿಸಿದ್ದ ಫೋಟೋವನ್ನು ನಟ ನಿರೂಪ್ ಭಂಡಾರಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ಜೊತೆಗೆ ತೆರೆ ಹಂಚಿಕೊಂಡ ಸಂತಸವನ್ನು ನಿರೂಪ್ ಹೇಳಿಕೊಂಡಿದ್ದು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

  ಈ ನಾಲ್ಕು ನಟರ ಸಮಾಗಮ ಆಗುವುದು ಚಿತ್ರದ ದೃಶ್ಯದಲ್ಲಿಯೇ ಅಥವಾ ಹಾಡಿನಲ್ಲಿಯೇ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್ ಆಗಿಯೇ ಉಳಿದಿದೆ. 'ಅಮರ್' ಸಿನಿಮಾಗೆ ನಾಗಶೇಖರ್ ನಿರ್ದೇಶನ ಹಾಗೂ ಸಂದೇಶ್ ನಾಗರಾಜ್ ನಿರ್ಮಾಣವಿದೆ.

  English summary
  3 kannada young stars shared screen space with Darshan in 'Amar' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X