»   »  ಪ್ರಿಯಾಂಕಳಿಗೆ ಮಾತು ಬೆಳ್ಳಿ ಮೌನ ಬಂಗಾರ!

ಪ್ರಿಯಾಂಕಳಿಗೆ ಮಾತು ಬೆಳ್ಳಿ ಮೌನ ಬಂಗಾರ!

Posted By: *ಜಯಂತಿ
Subscribe to Filmibeat Kannada
Priyanka in Yagna
ಹೆಸರು ಪ್ರಿಯಾಂಕ. ಕನ್ನಡದ ಹುಡುಗಿಯಂತೆ. ತುಂಡು ತುಂಡು ಕನ್ನಡ ಮಾತನಾಡಲಿಕ್ಕೆ ಗೊತ್ತು. ತೊಟ್ಟದ್ದೂ ತುಂಡುಲಂಗವೇ! ಪ್ರಿಯಾಂಕ 'ಯಜ್ಞ' ಚಿತ್ರದ ನಾಯಕಿ. ಹೇಗಿತ್ತು ಮೊದಲ ಚುಂಬನ ಎನ್ನುವ ಪ್ರಶ್ನೆಗೆ ಪ್ರಿಯಾಂಕಳದ್ದು ಪೆಚ್ಚುನಗೆ. ಮೊದಲ ಸಿನಿಮಾ. ಏನು ಮಾತನಾಡಲಿ. ಏನೂ ತೋಚುತ್ತಿಲ್ಲ ಎಂದು ಕೂತೇಬಿಟ್ಟಳು ಹುಡುಗಿ.

ಹೊಸ ಹುಡುಗಿ. ಕ್ಯಾಮೆರಾ ಪ್ರಭೆಯಲ್ಲಿ, ಮೈಕ್ ಎದುರಲ್ಲಿ ಮಾತನಾಡುವುದು ಕಷ್ಟ. ಸುದ್ದಿಗೋಷ್ಠಿ ನಂತರವಾದರೂ ಮನಸ್ಸು ಬಿಚ್ಚಲಿ ಎಂದು ಕೆಲವು ಪತ್ರಕರ್ತರು ಪ್ರಿಯಾಂಕಳನ್ನು ಮಾತಿಗೆ ಕರೆದರು. ಟೀವಿ ಬೆಳಕಿಗೆ ತನ್ನನ್ನು ಒಡ್ಡಿಕೊಂಡಿದ್ದ ಪ್ರಿಯಾಂಕ ನಿಧಾನವಾಗಿ ಪತ್ರಕರ್ತರ ಎದುರು ಕೂತಳು.

ಯಜ್ಞ ಚಿತ್ರದಲ್ಲಿ ಮಾಡ್ ಹುಡುಗಿಯ ಪಾತ್ರ. ಗಂಗಾ ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸಿದ್ದೇನೆ. ತಮಿಳು ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದೇನೆ. ಹೊಸ ಕನ್ನಡ ಅವಕಾಶಗಳು ಬರುತ್ತಿವೆ. ಆದರೆ, ತಮಿಳು ಚಿತ್ರದ ಕಾರಣ ಕನ್ನಡದಲ್ಲಿ ಹೊಸ ಚಿತ್ರವನ್ನು ಒಪ್ಪಿಕೊಳ್ಳಲಾಗುತ್ತಿಲ್ಲ ಎಂದರು ಪ್ರಿಯಾಂಕ. ಮುಂದೆ? ಪ್ರಿಯಾಂಕ ಕಣ್ಣುಗಳು ಕಿಟಕಿಯತ್ತ. ಆಕೆಯ ಬೆರಳುಗಳು ಕೈಚೀಲದಲ್ಲಿ ಏನನ್ನೋ ಹುಡುಕುತ್ತಿದ್ದವು. ಮನಸ್ಸು? ಚೆನ್ನೈನ ಫ್ಲೈಟ್ ಹತ್ತಿತ್ತೇನೋ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada