»   »  ಶಿಕಾರಿಯಾಗಿ ಕನ್ನಡಕ್ಕೆ ದಯಮಾಡಿದ ಮಮ್ಮೂಟಿ

ಶಿಕಾರಿಯಾಗಿ ಕನ್ನಡಕ್ಕೆ ದಯಮಾಡಿದ ಮಮ್ಮೂಟಿ

Subscribe to Filmibeat Kannada

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮೂಟ್ಟಿ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ. ಅಭಯಸಿಂಹ ನಿರ್ದೇಶನದ ಅವರೇ ಕಥೆ, ಚಿತ್ರಕಥೆ ಹಣೆದಿರುವ 'ಶಿಕಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಮ್ಮೂಟಿ ಎಂಟ್ರಿ ನೀಡಲಿದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಕಥೆಯನ್ನು ಶಿಕಾರಿ ಹೊಂದಿದೆಯಂತೆ. ಕಮರ್ಷಿಯಲ್ ಚಿತ್ರದಲ್ಲಿ ಏನೇನು ಇರಬೇಕೋ ಅವೆಲ್ಲವೂ ಇವೆ ಎನ್ನುತ್ತಾರೆ ನಿರ್ಮಾಪಕ ಎನ್.ಆರ್.ಶೆಟ್ಟಿ.

Mammootty to act in Kannada
ಕಳೆದ ಕೆಲವು ವರ್ಷಗಳಿಂದ ಮಮ್ಮೂಟ್ಟಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವ ಪ್ರಯತ್ನ ನಡೆಯುತ್ತಲೇ ಇತ್ತು. ಕೋಟಿ ನಿರ್ಮಾಪಕ ರಾಮು ಹಲವು ಬಾರಿ ಮಮ್ಮೂಟ್ಟಿ ಅವರನ್ನು ಸಂಪರ್ಕಿಸಿದ್ದರು. ಕಥೆ ಇಷ್ಟವಾಗದ ಕಾರಣ ಮಮ್ಮುಟ್ಟಿ ಕನ್ನಡಕ್ಕೆ ಬರಲುಒಪ್ಪಿಕೊಂಡಿರಲಿಲ್ಲ. ಈಗ 'ಶಿಕಾರಿ' ಚಿತ್ರದ ಕಥೆ ಇಷ್ಟವಾಗಿದ್ದರಿಂದ ಯಾವುದೇ ಒತ್ತಡ, ಪ್ರಭಾವ ಇಲ್ಲದೆ ಚಿತ್ರದಲ್ಲಿ ನಟಿಸಲು ಮಮ್ಮುಟ್ಟಿ ಮುಂದೆ ಬಂದಿದ್ದಾರೆ. ಆ ಮೂಲಕ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಟಿಸುವ ಅವರ ಆಸೆ ಈಡೇರಿದಂತಾಗಿದೆ.

ಕಥಾವಸ್ತು ಇಷ್ಟವಾದರೆ ಸಂಭಾವನೆ ಬಗ್ಗೆ ತಲೆಕೆಡಿಸಿಕೊಳ್ಳದ ಆಸಾಮಿ ಈ ಮಮ್ಮೂಟ್ಟಿ. ಕನ್ನಡ ಚಿತ್ರರಂಗದಲ್ಲಿ ನನಗೆ ಅಷ್ಟಾಗಿ ಬೇಡಿಕೆ ಇಲ್ಲ ಅಂದು ಗೊತ್ತು. ಆದ್ದರಿಂದ ಸಂಭಾವನೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕನ್ನಡದ ಮಾರುಕಟ್ಟೆಗೆ ತಕ್ಕಂತೆ ನನಗೆಷ್ಟು ಸಂಭಾವನೆ ಕೊಡಬಹುದು ಎಂಬುದನ್ನು ನೀವೇ ನಿರ್ಧರಿಸಿ ಎಂದು ಮಮ್ಮುಟ್ಟಿ ಅವರೇ ಹೇಳಿರುವುದಾಗಿ ಶಿಕಾರಿ ಚಿತ್ರದ ನಿರ್ಮಾಪಕ ಎನ್.ಆರ್. ಶೆಟ್ಟಿ ಸಿನಿ ಪತ್ರಕರ್ತರಿಗೆ ತಿಳಿಸಿದರು. ಚಿತ್ರಕ್ಕೆ ಅನ್ ಮೋಲ್ ಭಾವೆ ಸಂಗೀತ. ವಿಕ್ರಂ ಶ್ರೀವಾತ್ಸವ ಛಾಯಾಗ್ರಹಣವಿದೆ. ಸುಚಿತ್ರಾ ಸಾಥೆ ಸಂಕಲನ. ಚಿತ್ರೀಕರಣ ಕರ್ನಾಟಕದಲ್ಲೇ ನಡೆಯಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಬಾಸ್ ಚಿತ್ರದಲ್ಲಿ ಖ್ಯಾತ ತಮಿಳು ನಟ ಶಿವಾಜಿ ಪ್ರಭು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada