»   »  ನಾಣಿಗೇಕೋ ಅಮೂಲ್ಯ ಮೇಲೆ ಮುನಿಸು!

ನಾಣಿಗೇಕೋ ಅಮೂಲ್ಯ ಮೇಲೆ ಮುನಿಸು!

By: *ಜಯಂತಿ
Subscribe to Filmibeat Kannada

ತೀರಿಹೋದ ತಂದೆಯ ನೆನಪಿಸಿಕೊಳ್ಳುತ್ತಾ ಸಣ್ಣಗೆ ಕಣ್ಣು ತೀಡಿಕೊಂಡ ಮುದ್ದುಮುಖದ ನಟಿ ಅಮೂಲ್ಯ ಮನದಾಳದ ಒಂದು ಬೇಸರವನ್ನೂ ಹೊರಹಾಕಿದರು. ಅದೇ ನಾರಾಯಣ ವಿಚಾರ. ಬಾಲನಟಿಯಾಗಿ ಅಲ್ಲಿ ಇಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯಳನ್ನು ನಾಯಕಿಯಾಗಿಸಿದ್ದೇ ಎಸ್.ನಾರಾಯಣ್. ಚೆಲುವಿನ ಚಿತ್ತಾರ ಮೂಲಕ ನಾರಾಯಣ್ ಕಿಸೆ ತುಂಬಿಸಿಕೊಳ್ಳುವಲ್ಲಿ ಗಣೇಶ್ ಕರಾಮತ್ತಿನಷ್ಟೇ ಅಮೂಲ್ಯಳ ಸ್ನಿಗ್ಧ ಚೆಲುವೂ ಕಾರಣವಾಗಿತ್ತು.

ಆಕೆಯ ಮುಖದ ಭಾವದ ಮೇಲೆ ಅಪಾರ ವಿಶ್ವಾಸ ಇಟ್ಟುಕೊಂಡಿದ್ದ ನಾರಾಯಣ್, ತಮ್ಮ ಮಗ ಪಂಕಜ್ ನಾಯಕನಾದ ಚಿತ್ರಕ್ಕೂ ಅಮೂಲ್ಯಳನ್ನೇ ನಾಯಕಿಯಾಗಿ ಮಾಡ್ದಿದರು. ಈ ನಟಿಯನ್ನೇ ನಾರಾಯಣ್ ಸೊಸೆ ಮಾಡಿಕೊಳ್ಳುತ್ತಾರಂತೆ ಎಂದು ಕೂಡ ಗಾಂಧಿನಗರದ ಗಲ್ಲಿಗಳು ಪಿಸುಗುಟ್ಟಿದ್ದವು. ಅಂಥಾ ನಾರಾಯಣ್‌ಗೆ ಯಾಕೋ ಈಗ ಅಮೂಲ್ಯ ಮೇಲೆ ಮುನಿಸಾಗಿದೆ. ಅದೇಕೆ ಎಂಬುದು ಖುದ್ದು ಅಮೂಲ್ಯಳಿಗೂ ಗೊತ್ತಿಲ್ಲ.

'ಪ್ರೇಮಿಸಂ" ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಅಮೂಲ್ಯ ತನ್ನ ಈ ಪ್ರಶ್ನೆಯನ್ನು ಹೇಳಿಕೊಂಡು ಸಣ್ಣಗೆ ಕಣ್ಣೀರಾದಳು. ನಾರಾಯಣ್ ಬಗ್ಗೆ ಈಗಲೂ ತನಗೆ ಗೌರವ ಹಾಗೇ ಇದೆ ಎಂದಳು ಅಮೂಲ್ಯ. ತನ್ನ ತಂದೆ ಸತ್ತಾಗ ನೋಡಲು ನಾರಾಯಣ್ ಬರದೇ ಇದ್ದದಕ್ಕೆ, ಫೋನ್ ಮಾಡಿದರೂ ಮಾತಾಡದೇ ತಪ್ಪಿಸಿಕೊಂಡು ಓಡಾಡುತ್ತಿರುವುದಕ್ಕೆ ಅಮೂಲ್ಯಳಿಗೆ ಬೇಸರವಿದೆ. ಅವರ ಈ ವರ್ತನೆಗೆ ಕಾರಣವೇನು ಎಂಬುದು ಯಕ್ಷ ಪ್ರಶ್ನೆ. ನಾರಾಯಣ್ ಅವರದ್ದು ಮಾತ್ರ ಈ ವಿಷಯದಲ್ಲಿ ದಿವ್ಯ ಮೌನ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada