»   » ಸಾನಿಯಾ ಮಿರ್ಜಾ ಜೊತೆ ಮಲಿಕ್ ಮದುವೆ

ಸಾನಿಯಾ ಮಿರ್ಜಾ ಜೊತೆ ಮಲಿಕ್ ಮದುವೆ

Posted By:
Subscribe to Filmibeat Kannada

ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮುಂದಿನ ತಿಂಗಳು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯಬ್ ಮಲಿಕ್ ಅವರನ್ನು ಮದುವೆಯಾಗಲಿದ್ದಾರೆ. ಸ್ವತಃ ಈ ಸುದ್ದಿಯನ್ನು ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಖಚಿತ ಪಡಿಸಿದ್ದಾರೆ. ಸಾನಿಯಾ ಮತ್ತು ಮಲಿಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದು ಏಪ್ರಿಲ್ ನಲ್ಲಿ ವಿವಾಹ ನಿಗದಿಯಾಗಿದೆ ಎಂದು ಪಾಕಿಸ್ತಾನದ 'ಜಿಯೋ ಟಿವಿ' ಸಹ ವರದಿ ಮಾಡಿದೆ.

ಕಳೆದ ಆರು ತಿಂಗಳಿನಿಂದ ಸಾನಿಯಾ ಮತ್ತು ಮಲಿಕ್ ಪರಸ್ಪರ ಪ್ರೀತಿಸುತ್ತಿದ್ದರು. ಆದ್ದರಿಂದ ಇತ್ತೀಚೆಗಷ್ಟೇ ಬಾಲ್ಯದ ಗೆಳೆಯ ಸೊಹರಬ್ ಮಿರ್ಜಾ ಜತೆಗಿನ ನಿಶ್ಚಿತಾರ್ಥವನ್ನು ಸಾನಿಯಾ ಮುರಿದು ಕೊಂಡಿದ್ದರು. ಇವರ ವಿವಾಹ ಆರತಕ್ಷತೆ ಲಾಹೋರ್ ನಲ್ಲಿ ಏಪ್ರಿಲ್ 16 ಅಥವಾ 17 ರಂದು ನಡೆಯಲಿದೆ.

ಮಲಿಕ್ 2002 ರಲ್ಲಿ ಹೈದರಾಬಾದ್ ನ ಮತ್ತೊಬ್ಬ ಯುವತಿ ಆಯೆಷಾ ಸಿದ್ದಿಕಿ ಅವರನ್ನು ಮದುವೆಯಾಗಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಮಲಿಕ್ ಕುಟುಂಬದ ಸದಸ್ಯರು ಏಪ್ರಿಲ್ 7ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಮದುವೆಯಾದ ಬಳಿಕ ಇವರಿಬ್ಬರೂ ದುಬೈ ನಲ್ಲಿ ನೆಲಸಲಿದ್ದಾರೆ ಎಂದು ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಹೇಳಿದ್ದಾರೆ.

ಸದ್ಯಕ್ಕೆ ಶೋಯಬ್ ದುಬೈನಲ್ಲಿದ್ದಾರೆ. ಮದುವೆಯ ಬಳಿಕವೂ ಸಾನಿಯಾ ಟೆನ್ನಿಸ್ ನಲ್ಲಿ ಮುಂದುವರೆಯಲಿದ್ದಾರೆ ಎಂದು ಸಾನಿಯಾ ಅವರ ತಂದೆ ತಿಳಿಸಿದ್ದಾರೆ. ನನ್ನ ಜೀವನದಲ್ಲಿ ಮರೆಯಲಾಗದ ದಿನ ನನ್ನ ಮದುವೆ. ಏತನ್ಮಧ್ಯೆ ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡೆಗಳಲ್ಲಿ ಭಾರತದ ಪರವಾಗಿ ಪಾಲ್ಗೊಳ್ಳಲು ನಾನು ಸಂಪೂರ್ಣ ಫಿಟ್ ಆಗಿದ್ದೇನೆ ಎಂದು ಸಾನಿಯಾ ಪ್ರತಿಕ್ರಿಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada